
shimoga | bhadravati | ಭದ್ರಾವತಿ – 9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ : 70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
ಶಿವಮೊಗ್ಗ (shivamogga), ಸೆ. 13: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (sexual harassment) ಎಸಗಿದ್ದ ವೃದ್ದರೋರ್ವರಿಗೆ, ಶಿವಮೊಗ್ಗ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ – 1, 20 ವರ್ಷ ಕಠಿಣ ಜೈಲು ಶಿಕ್ಷೆ (rigorous imprisonment) ವಿಧಿಸಿ 13-9-2024 ರಂದು ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ವೃದ್ದನಿಗೆ 70 ವರ್ಷ ವಯಸ್ಸಾಗಿದೆ (ಪೋಕ್ಸೋ ಕಾಯ್ದೆಯಡಿ ಹೆಸರು, ವಿಳಾಸ ಬಹಿರಂಗಪಡಿಸುವಂತಿಲ್ಲ). ಶಿಕ್ಷೆಯ ಜೊತೆಗೆ 2. 10 ಲಕ್ಷ ರೂ. ದಂಡ (fine) ಕೂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 1 ವರ್ಷ ಸಾದಾ ಜೈಲು ಶಿಕ್ಷೆ (simple imprisonment) ಅನುಭವಿಸುವಂತೆ ನ್ಯಾಯಾಲಯ (court) ಆದೇಶಿಸಿದೆ.
ದಂಡದ ಮೊತ್ತದಲ್ಲಿ 2 ಲಕ್ಷ ರೂ. ಹಾಗೂ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ಮೊತ್ತವನ್ನು, ನೊಂದ ಬಾಲಕಿಗೆ ನೀಡುವಂತೆ ನ್ಯಾಯಾಧೀಶರಾದ ಮೋಹನ್ ಜೆ. ಎಸ್. ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಹೆಚ್. ಆರ್. ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿವರ : 2023 ನೇ ಸಾಲಿನಲ್ಲಿ ಸದರಿ ಪ್ರಕರಣ ನಡೆದಿತ್ತು. 9 ವರ್ಷದ ಬಾಲಕಿ (girl) ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆ (holehonnuru police station) ಯಲ್ಲಿ ವಯೋವೃದ್ದನ ವಿರುದ್ದ ಪೋಕ್ಸೋ ಕಾಯ್ದೆ (pocso act) ಹಾಗೂ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಹೊಳೆಹೊನ್ನೂರು ಠಾಣೆ ಇನ್ಸ್’ಪೆಕ್ಟರ್ (inspector) ಲಕ್ಷ್ಮೀಪತಿ ಆರ್. ಎಲ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ವಯೋವೃದ್ದನ ವಿರುದ್ದ ನ್ಯಾಯಾಲಯಕ್ಕೆ ಆರೋಪಪಟ್ಟಿ (chargesheet) ದಾಖಲಿಸಿದ್ದರು.