shimoga | onam festival | Shimoga : Onam celebration by Kerala society ಶಿವಮೊಗ್ಗ : ಕೇರಳ ಸಮಾಜದಿಂದ ಓಣಂ ಹಬ್ಬ ಆಚರಣೆ

shimoga | onam festival | ಶಿವಮೊಗ್ಗ : ಕೇರಳ ಸಮಾಜದಿಂದ ಓಣಂ ಹಬ್ಬ ಆಚರಣೆ

ಶಿವಮೊಗ್ಗ (shivamogga) ಸೆ. 15: ಶಿವಮೊಗ್ಗ ನಗರದಲ್ಲಿ ಸೆ. 15 ರ ಭಾನುವಾರ ಕೇರಳ ಸಮಾಜ (kerala smaja) ದವರು ಓಣಂ ಹಬ್ಬ (onam festival) ವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ಓಣಂ ಹಬ್ಬವು ಕೇರಳ (kerala state) ಸಂಸ್ಕೃತಿಯ ಪ್ರತೀಕವಾಗಿದೆ. ಆಕರ್ಷಕ ಹೂವಿನ ರಂಗೋಲಿ ಹಾಕುವುದು ಹಬ್ಬದ ವಿಶೇಷತೆಗಳಲ್ಲೊಂದಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳ ಸಮಾಜದ ಸ್ತ್ರೀ – ಪುರುಷರು ಮನೆಗಳಲ್ಲಿ ವರ್ಣರಂಜಿತ ರಂಗೋಲಿ ಹಾಕಿ ಗಮನ ಸೆಳೆದರು.

‘ಓಣಂ ಹಬ್ಬವನ್ನು ಸುಗ್ಗಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಲಾಗುತ್ತದೆ. ಹಾಗೆಯೇ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಇದನ್ನು ತಿರುವೋಣಂ ಎಂದು ಸಹ ಕರೆಯುತ್ತಾರೆ.

ಹಬ್ಬದ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ವಿವಿಧ ರೀತಿಯ ಭಕ್ಷ್ಯ, ಭೋಜನಗಳನ್ನು ತಯಾರಿಸಿ ಸ್ನೇಹಿತರು, ಬಂಧುಗಳೊಂದಿಗೆ ಸವಿಯಲಾಯಿತು’ ಎಂದು ಕೇರಳ ಸಮಾಜದ ಪ್ರಮುಖರಾದ ಶಿವಕುಮಾರ್ ಅವರು ತಿಳಿಸಿದ್ದಾರೆ.

shimoga | bhadravati | Huge human chain in Shimoga – Bhadravati Taluk: Thousands of people involved! ಶಿವಮೊಗ್ಗ – ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬೃಹತ್ ಮಾನವ ಸರಪಳಿ : ಸಾವಿರಾರು ಜನ ಭಾಗಿ! Previous post shimoga | bhadravati | ಶಿವಮೊಗ್ಗ – ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬೃಹತ್ ಮಾನವ ಸರಪಳಿ : ಸಾವಿರಾರು ಜನ ಭಾಗಿ!
thirthahalli | agumbe | Thirthahalli - Agumbe SVS school rare program! ತೀರ್ಥಹಳ್ಳಿ - ಆಗುಂಬೆ ಎಸ್.ವಿ.ಎಸ್ ಶಾಲೆಯಲ್ಲಿ ಅಪರೂಪದ ಕಾರ್ಯಕ್ರಮ! Next post thirthahalli | agumbe | ತೀರ್ಥಹಳ್ಳಿ – ಆಗುಂಬೆ ಎಸ್.ವಿ.ಎಸ್ ಶಾಲೆಯಲ್ಲಿ ಅಪರೂಪದ ಕಾರ್ಯಕ್ರಮ!