bhadravati | eid milad procession | ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು!

bhadravati | eid milad procession | Hindu relatives who distributed buttermilk! ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು!

ಭದ್ರಾವತಿ (bhadravati), ಸೆ. 19: ಶಿವಮೊಗ್ಗ ನಗರದ (shimoga city) ವಿವಿಧೆಡೆ ಇತ್ತೀಚೆಗೆ ಜರುಗಿದ ಗಣೇಶಮೂರ್ತಿಗಳ ಮೆರವಣಿಗೆ ವೇಳೆ, ಮುಸ್ಲಿಂ ಬಾಂಧವರು ಗಣಪತಿಗೆ (ganapati idol) ಹೂವಿನ ಮಾಲೆ ಹಾಕಿ ಹಾಗೂ ಸಿಹಿ ವಿತರಿಸಿ ಸೌಹಾರ್ದತೆ ಮೆರೆದಿದ್ದರು.

ಈ ನಡುವೆ ಭದ್ರಾವತಿಯಲ್ಲಿ ಸೆ. 19 ರಂದು ನಡೆದ ಈದ್ ಮಿಲಾದ್ ಮೆರವಣಿಗೆ (bhadravati eid milad procession) ವೇಳೆ, ಹಿಂದೂ ಬಾಂಧವರು ಮಜ್ಜಿಗೆ ವಿತರಣೆ ಮಾಡಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಕಿರಣ್, ರಾಜ್ ಚೋಪ್ರಾ, ಪ್ರಶಾಂತ್, ಡಾ. ವಿಕ್ರಂ ಸುದರ್ಶನ್, ಹೆ್ಚ್.ಎಸ್.ಮಂಜು, ಗಿರೀಶ್ ಶೆಟ್ಟಿ ಮೊದಲಾದವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮುಸ್ಲಿಂ ಬಾಂಧವರಿಗೆ ಮಜ್ಜಿಗೆ ವಿತರಣೆ ಮಾಡಿ ಗಮನ ಸೆಳೆದರು.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ, ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಹಿಂದೂ – ಮುಸ್ಲಿಂ ಸಮಾಜಗಳ ನಡುವೆ ಕಂಡುಬಂದ ಸಾಮರಸ್ಯ, ಭಾವೈಕ್ಯತೆಯು (hindu and muslim communities harmony) ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →