bhadravati | eid milad procession | Hindu relatives who distributed buttermilk! ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು!

bhadravati | eid milad procession | ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು!

ಭದ್ರಾವತಿ (bhadravati), ಸೆ. 19: ಶಿವಮೊಗ್ಗ ನಗರದ (shimoga city) ವಿವಿಧೆಡೆ ಇತ್ತೀಚೆಗೆ ಜರುಗಿದ ಗಣೇಶಮೂರ್ತಿಗಳ ಮೆರವಣಿಗೆ ವೇಳೆ, ಮುಸ್ಲಿಂ ಬಾಂಧವರು ಗಣಪತಿಗೆ (ganapati idol) ಹೂವಿನ ಮಾಲೆ ಹಾಕಿ ಹಾಗೂ ಸಿಹಿ ವಿತರಿಸಿ ಸೌಹಾರ್ದತೆ ಮೆರೆದಿದ್ದರು.

ಈ ನಡುವೆ ಭದ್ರಾವತಿಯಲ್ಲಿ ಸೆ. 19 ರಂದು ನಡೆದ ಈದ್ ಮಿಲಾದ್ ಮೆರವಣಿಗೆ (bhadravati eid milad procession) ವೇಳೆ, ಹಿಂದೂ ಬಾಂಧವರು ಮಜ್ಜಿಗೆ ವಿತರಣೆ ಮಾಡಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಕಿರಣ್, ರಾಜ್ ಚೋಪ್ರಾ, ಪ್ರಶಾಂತ್, ಡಾ. ವಿಕ್ರಂ ಸುದರ್ಶನ್, ಹೆ್ಚ್.ಎಸ್.ಮಂಜು, ಗಿರೀಶ್ ಶೆಟ್ಟಿ ಮೊದಲಾದವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮುಸ್ಲಿಂ ಬಾಂಧವರಿಗೆ ಮಜ್ಜಿಗೆ ವಿತರಣೆ ಮಾಡಿ ಗಮನ ಸೆಳೆದರು.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ, ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಹಿಂದೂ – ಮುಸ್ಲಿಂ ಸಮಾಜಗಳ ನಡುವೆ ಕಂಡುಬಂದ ಸಾಮರಸ್ಯ, ಭಾವೈಕ್ಯತೆಯು (hindu and muslim communities harmony) ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Shimoga : Eid Milad procession on 22nd - Vehicular traffic route change ಶಿವಮೊಗ್ಗ : ಸೆ. 22 ರಂದು ಈದ್ ಮಿಲಾದ್ ಮೆರವಣಿಗೆ - ವಾಹನ ಸಂಚಾರ ಮಾರ್ಗ ಬದಲಾವಣೆ Previous post shimoga | eid milad procession | ಶಿವಮೊಗ್ಗ : ಸೆ. 22 ರಂದು ಈದ್ ಮಿಲಾದ್ ಮೆರವಣಿಗೆ – ವಾಹನ ಸಂಚಾರ ಮಾರ್ಗ ಬದಲಾವಣೆ
Shimoga: In which areas will there be no electricity on January 31? shimoga | ಶಿವಮೊಗ್ಗ : ಯಾವೆಲ್ಲ ಏರಿಯಾಗಳಲ್ಲಿ ಜ. 31 ರಂದು ವಿದ್ಯುತ್ ಇರಲ್ಲ? Next post shimoga | power cut news | ಶಿವಮೊಗ್ಗ : ಸೆ. 21 ರಂದು ಗಾಜನೂರು, ಸಕ್ರೆಬೈಲು ಮೊದಲಾದೆಡೆ ವಿದ್ಯುತ್ ವ್ಯತ್ಯಯ!