Shimoga : Eid Milad procession on 22nd - Vehicular traffic route change ಶಿವಮೊಗ್ಗ : ಸೆ. 22 ರಂದು ಈದ್ ಮಿಲಾದ್ ಮೆರವಣಿಗೆ - ವಾಹನ ಸಂಚಾರ ಮಾರ್ಗ ಬದಲಾವಣೆ

shimoga | eid milad procession | ಶಿವಮೊಗ್ಗ : ಸೆ. 22 ರಂದು ಈದ್ ಮಿಲಾದ್ ಮೆರವಣಿಗೆ – ವಾಹನ ಸಂಚಾರ ಮಾರ್ಗ ಬದಲಾವಣೆ

ಶಿವಮೊಗ್ಗ (shivamogga), ಸೆ .19 : ಈದ್ ಮಿಲಾದ್ (eid milad un nabi) ಪ್ರಯುಕ್ತ ಸೆ. 22 ರಂದು ಶಿವಮೊಗ್ಗ ನಗರದಲ್ಲಿ ಮೆರವಣಿಗೆ ನಡೆಯುವುದರಿಂದ ಅಂದು ವಿವಿಧೆಡೆ ವಾಹನಗಳ ಸಂಚಾರ ನಿಷೇಧ, ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ (shimoga dc) ಗುರುದತ್ತ ಹೆಗಡೆಯವರು ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

ಮೆರವಣಿಗೆಯು ಗಾಂಧಿ ಬಜಾರ್‌ (gandhi bazar) ನ ಜಾಮೀಯ ಮಸೀದಿಯಿಂದ ಆರಂಭಗೊಳ್ಳಲಿದೆ. ಗಾಂಧಿ ಬಜಾರ್ 2 ನೇ ಕ್ರಾಸ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಓಲ್ಡ್ ಬಾರ್ ಲೈನ್ ರಸ್ತೆ – ಪೆನ್ಷನ್ ಮೊಹಲ್ಲಾ – ಬಾಲ್‌ರಾಜ್ ಅರಸ್ ರಸ್ತೆ,

ಮಹಾವೀರ ಸರ್ಕಲ್, ಗೋಪಿ ಸರ್ಕಲ್, ನೆಹರು ರಸ್ತೆ, ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿ ಹೆಚ್ ರಸ್ತೆ, ಅಶೋಕ ಸರ್ಕಲ್, ಎನ್ ಟಿ ರಸ್ತೆ, ಗುರುದೇವ ರಸ್ತೆ, ರ್ಕ್ಲಾಕ್ ಪೇಟೆ, ನೂರಾನಿ ಮಸೀದಿ, ಕೆಆರ್ ಪುರಂ ರಸ್ತೆ ಮಾರ್ಗವಾಗಿ ಆಮೀರ್ ಅಹಮ್ಮದ್ ಸರ್ಕಲ್ ತಲುಪುತ್ತದೆ.

ಮಾರ್ಗ ಬದಲಾವಣೆ : ಭದ್ರಾವತಿ, ಬೆಂಗಳೂರು, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಎಂ.ಆರ್.ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಹೊಳೆಹೊನ್ನೂರು ಸರ್ಕಲ್, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲಾ ಭಾರೀ ವಾಹನ ಮತ್ತು ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರ ಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್ ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು. 

ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ ಸರಕು ವಾಹನಗಳು ಬೈಪಾಸ್ ಮುಖಾಂತರವಾಗಿ ಎಂ.ಆರ್.ಎಸ್ ಸರ್ಕಲ್, ವಿದ್ಯಾನಗರ ಶಂಕರಮಠ ಸರ್ಕಲ್, ಸಂಗೊಳ್ಳಿರಾಯಣ್ಣ ಸರ್ಕಲ್ ಮುಖಾಂತರ ಹೋಗುವುದು.

 ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಎಂ.ಆರ್.ಎಸ್ ಸರ್ಕಲ್ ಮುಖಾಂತರ ಹೋಗುವುದು.

ಶಿಕಾರಿಪುರ, ಸೊರಬ, ಆನವಟ್ಟಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಮತ್ತು ಹೊರ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್ ಪೊಲೀಸ್ ಚೌಕಿ, ಆಲ್ಕೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಂಚರಿಸುವುದು.

ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ: ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಮಾರ್ಗವಾದ ಗಾಂಧಿಬಜಾರ್ ಜಾಮೀಯ ಮಸೀದಿಯಿಂದ – ಗಾಂಧಿಬಜಾರ್ 2ನೇ ಕ್ರಾಸ್ -ನಾಗಪ್ಪ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸೆ-್ತ ಓಲ್ಡ್ ಬಾರ್ ಲೈನ್ ರಸ್ತೆ-ಪೆನ್ಷನ್ ಮೊಹಲ್ಲಾ- ಬಾಲ್ ರಾಜ್ ಅರಸ್ ರಸ್ತೆ- ಮಹಾವೀರ್ ಸರ್ಕಲ್,

ಗೋಪಿ ಸರ್ಕಲ್, ನೆಹರು ರಸ್ತೆ- ಅಮೀರ್ ಆಹ್ಮದ್ ಸರ್ಕಲ್- ಬಿ.ಹೆಚ್ ರಸ್ತೆ-ಅಶೋಕ ಸರ್ಕಲ್-ಎನ್ ಟಿ ರಸ್ತೆ-ಗುರುದೇವ ರಸ್ತೆ-ಕ್ಲಾರ್ಕಪೇಟೆ-ನೂರಾನಿ ಮಸೀದಿ-ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹ್ಮದ್ ಸರ್ಕಲ್ ವರೆಗಿನ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತ ಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಅಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Previous post shimoga power cut news | ಶಿವಮೊಗ್ಗ – ಸೆ. 21 ರಂದು ನೆಹರು ರಸ್ತೆ, ದುರ್ಗಿಗುಡಿ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ!
bhadravati | eid milad procession | Hindu relatives who distributed buttermilk! ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು! Next post bhadravati | eid milad procession | ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ – ಮಜ್ಜಿಗೆ ವಿತರಿಸಿದ ಹಿಂದೂ ಬಾಂಧವರು!