shimoga | Shimoga : An unknown youth died! ಶಿವಮೊಗ್ಗ : ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಯುವಕ ಸಾವು!

shimoga | ಶಿವಮೊಗ್ಗ : ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಯುವಕ ಸಾವು!

ಶಿವಮೊಗ್ಗ (shivamogga), ಸೆ. 20: ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (govt meggan hospital) ದಾಖಲಿಸಲಾಗಿದ್ದ ಅಪರಿಚಿತ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ (shimoga ksrtc bus stand) ಸಮೀಪ ಸುಸ್ತಾಗಿ ಮಲಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೆ.19 ರಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.

ಚಹರೆ : ಮೃತರಿಗೆ 30 ರಿಂದ 35 ವರ್ಷವಿದೆ. 5. 10 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ದೃಢವಾದ ಮೈಕಟ್ಟು ಹೊಂದಿದ್ದು, ಎದೆಯ ಬಲಭಾಗದ ಮೇಲೆ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. 

ಮೈಮೇಲೆ ತಿಳಿನೀಲಿ ಬಣ್ಣದ ಕಪ್ಪು ಚುಕ್ಕೆಗಳಿರುವ ಅರ್ಧ ತೋಳಿದ ಶರ್ಟ್, ಪಾಚಿ ಬಣ್ಣದ ಚಡ್ಡಿ ಧರಿಸಿರುತ್ತಾರೆ. ಮೃತ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ (doddapete police station) ದೂ.ಸಂ. : 08182-261414 / 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Shimoga: In which areas will there be no electricity on January 31? shimoga | ಶಿವಮೊಗ್ಗ : ಯಾವೆಲ್ಲ ಏರಿಯಾಗಳಲ್ಲಿ ಜ. 31 ರಂದು ವಿದ್ಯುತ್ ಇರಲ್ಲ? Previous post shimoga | power cut news | ಶಿವಮೊಗ್ಗ : ಸೆ. 21 ರಂದು ಗಾಜನೂರು, ಸಕ್ರೆಬೈಲು ಮೊದಲಾದೆಡೆ ವಿದ್ಯುತ್ ವ್ಯತ್ಯಯ!
shiralkoppa murder case | Shiralakoppa - Terrible murder case: The killers cut the body into 7 pieces! ಶಿರಾಳಕೊಪ್ಪದ ಭಯಾನಕ ಹತ್ಯೆ ಪ್ರಕರಣ : 7 ತುಂಡುಗಳಾಗಿ ದೇಹ ಕತ್ತರಿಸಿ ಹಾಕಿದ್ದ ಹಂತಕರು! Next post shiralkoppa murder case | ಶಿರಾಳಕೊಪ್ಪ – ಭಯಾನಕ ಹತ್ಯೆ ಪ್ರಕರಣ : 7 ತುಂಡುಗಳಾಗಿ ದೇಹ ಕತ್ತರಿಸಿ ಹಾಕಿದ್ದ ಹಂತಕರು!