shimoga woman missing case | ಶಿವಮೊಗ್ಗ : ಮನೆಯಿಂದ ಹೊರಹೋದ ಮಹಿಳೆ ಕಣ್ಮರೆ!
ಶಿವಮೊಗ್ಗ (shivamogga), ಅ. 07: ಮನೆಯಿಂದ ಹೊರ ಹೋದ ಮಹಿಳೆಯೋರ್ವರು, ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ನಗರದ ಹೊರವಲಯ ಹರಿಗೆ ಬಡಾವಣೆಯಲ್ಲಿ ನಡೆದಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಅ. 7 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ‘ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಹರಿಗೆ ಗ್ರಾಮದ ನಿವಾಸಿಯಾದ, ಗಾಯತ್ರಿ ಬಿ ಕೋಂ ಪ್ರಕಾಶ್‌ಕುಮಾರ್ ಪಿ. ಆರ್. ಎಂಬ 51 ವರ್ಷದ ಮಹಿಳೆಯು, ಅ.03 ರಂದು ಮನೆಯಿಂದ ಹೊರಗೆ ಹೋಗಿದ್ದರು. ನಂತರ ಇಲ್ಲಿಯವರೆಗೂ ಅವರು ಮನೆಗೆ ಹಿಂದಿರುಗಿಲ್ಲ.
ಮಹಿಳೆಯು ಸಮಾರು 5 ಅಡಿ ಎತ್ತರ, ದುಂಡು ಮುಖ, ದಪ್ಪನೆಯ ಮೈಕಟ್ಟು ಹೊಂದಿದ್ದು, ಕನ್ನಡಕ ಧರಿಸುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವ ವೇಳೆ ಹಳದಿ ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ.
ಮಹಿಳೆಯ ಕುರಿತು ಸುಳಿವು ದೊರೆತಲ್ಲಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ. : 08182-261418/ 261410/ 261422/ 9480803350 ಅಥವಾ ಕಂಟ್ರೋಲ್ ರೂಂ ನಂಬರ್ 100 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
The incident of a woman who left her house and disappeared mysteriously took place in Harige village on the outskirts of Shimoga city. In this regard, the police department Released the press statement. Gayatri B Kom Prakashkumar P, a resident of Harige village under Shivamogga rural police station. 51-year-old woman had gone out of the house on October 03. Then till now she has not returned home.
