Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ!

shimoga rain | ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!

ಶಿವಮೊಗ್ಗ, ಅ. 14: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ, ಇತ್ತೀಚೆಗೆ ರಾಜ್ಯದ ಹಲವೆಡೆ ಹಿಂಗಾರು ಮಳೆ ಅಬ್ಬರ ಜೋರಾಗಿದೆ. ಕಳೆದ ಕೆಲ ದಿನಗಳಿಂದ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯೂ ಭಾರೀ ಮಳೆಯಾಗುತ್ತಿದೆ.

ಈ ನಡುವೆ, ಅ. 13 ರ ಭಾನುವಾರ ರಾತ್ರಿ ಕೂಡ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಧಾರಾಕಾರ ವರ್ಷಧಾರೆಯಾಯಿತು. ಶಿವಮೊಗ್ಗ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು.

ಇದರಿಂದ ನಗರದ ಹಲವೆಡೆ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು, ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ತಡರಾತ್ರಿಯ ನಂತರವೂ ಹಲವೆಡೆ ಭರ್ಜರಿ ಮಳೆಯಾದ ವರದಿಗಳು ಬಂದಿವೆ.

ಅ. 14 ರ ಸೋಮವಾರ ಬೆಳಿಗ್ಗೆಯಿಂದ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಮೋಡ ಕವಿದ ವಾತಾವರಣ ನೆಲೆಸಿದೆ. ತಾಪಮಾನದ ಪ್ರಮಾಣ ಇಳಿಕೆಯಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮತ್ತೆ ಕೋಡಿ : ಎಡೆಬಿಡದೆ ಸುರಿದ ಮುಂಗಾರು ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಇದೀಗ ಮತ್ತೆ ಬೀಳುತ್ತಿರುವ ಮಳೆಯಿಂದ, ಕೆರೆಕಟ್ಟೆಗಳು ಮತ್ತೆ ಭರ್ತಿಯಾಗಿ ಕೋಡಿ ಬಿದ್ದು ಹರಿಯಲಾರಂಭಿಸಿವೆ.

ಮುನ್ಸೂಚನೆ : ಮತ್ತೊಂದೆಡೆ, ಹವಾಮಾನ ಇಲಾಖೆಯು ಬುಧವಾರದಿಂದ ಮತ್ತೆ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅ. 18 ರಂದು ಧಾರಾಕಾರ ವರ್ಷಧಾರೆ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಸಂಬಂಧ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

As a result of the depression in the Arabian Sea, many parts of the state have recently experienced heavy monsoon rains. For the past few days, heavy rain has been falling in various parts of Shimoga district. Meanwhile, there was torrential rain in Shimoga city and many parts of the taluk on Sunday night as well. Thunder and lightning rained in Shimoga city.

The car of those who were going to Sigandur from Bangalore overturned near Kunsi in Shimoga : one dead four injured! ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದವರ ಕಾರು ಶಿವಮೊಗ್ಗದ ಕುಂಸಿ ಬಳಿ ಪಲ್ಟಿ : ಓರ್ವ ಸಾವು ನಾಲ್ವರಿಗೆ ಗಾಯ! Previous post shimoga | ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದವರ ಕಾರು ಶಿವಮೊಗ್ಗದ ಕುಂಸಿ ಬಳಿ ಪಲ್ಟಿ : ಓರ್ವ ಸಾವು, ನಾಲ್ವರಿಗೆ ಗಾಯ!
ಭದ್ರಾವತಿ : ಪಲ್ಟಿಯಾಗಿ ಬಿದ್ದ ಕಾರು – ಹೊಸ ಸೇತುವೆ ಅವ್ಯವಸ್ಥೆ ಸರಿಪಡಿಸಲು ಮುಂದಾಗುವುದೆ ಆಡಳಿತ? bhadravati | Bhadravati : Car overturned - new bridge to fix the mess administration? Next post bhadravati | ಭದ್ರಾವತಿ : ಪಲ್ಟಿಯಾಗಿ ಬಿದ್ದ ಕಾರು – ಹೊಸ ಸೇತುವೆ ಅವ್ಯವಸ್ಥೆ ಸರಿಪಡಿಸಲು ಮುಂದಾಗುವುದೆ ಆಡಳಿತ?