ಭದ್ರಾವತಿ : ಪಲ್ಟಿಯಾಗಿ ಬಿದ್ದ ಕಾರು – ಹೊಸ ಸೇತುವೆ ಅವ್ಯವಸ್ಥೆ ಸರಿಪಡಿಸಲು ಮುಂದಾಗುವುದೆ ಆಡಳಿತ? bhadravati | Bhadravati : Car overturned - new bridge to fix the mess administration?

bhadravati | ಭದ್ರಾವತಿ : ಪಲ್ಟಿಯಾಗಿ ಬಿದ್ದ ಕಾರು – ಹೊಸ ಸೇತುವೆ ಅವ್ಯವಸ್ಥೆ ಸರಿಪಡಿಸಲು ಮುಂದಾಗುವುದೆ ಆಡಳಿತ?

ಭದ್ರಾವತಿ (bhadravati), ಅ. 14: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು, ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಘಟನೆ, ಭದ್ರಾವತಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿಯ ಹೊಸ ಸೇತುವೆ ಸಮೀಪ ಇತ್ತೀಚೆಗೆ ನಡೆದಿದೆ.

ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು, ತಕ್ಷಣವೇ ಇಆರ್’ವಿ ವಾಹನದ ಸಿಬ್ಬಂದಿಗಳು ಸಾರ್ವಜನಿಕರ ನೆರವಿನೊಂದಿಗೆ  ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನೆರವಾಗಿದ್ದಾರೆ. ಸದರಿ ಅಪಘಾತದ ಕುರಿತಂತೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ಅವ್ಯವಸ್ಥೆ : ಹೊಸ ಸೇತುವೆ ಬಳಿ ವಿದ್ಯುತ್ ದೀಪಗಳ ವ್ಯವಸ್ಥೆ ಸರಿಯಿಲ್ಲ. ಇದರಿಂದ ರಾತ್ರಿ ವೇಳೆ ಜನ – ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪರಿಣಮಿಸುತ್ತಿದೆ. ಹಾಗೆಯೇ ಸೇತುವೆಯ ತಡೆಗೋಡೆಯು ಸಮರ್ಪಕವಾಗಿಲ್ಲ ಎಂದು ನಾಗರೀಕರು ದೂರಿದ್ದಾರೆ.

ಈ ಎಲ್ಲ ಕಾರಣಗಳಿಂದ ಹೊಸ ಸೇತುವೆ ಬಳಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸುಗಮ ಜನ – ವಾಹನ ಸಂಚಾರಕ್ಕೆ ಅಗತ್ಯ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.

An incident where the driver lost control of the car hit the divider and overturned near the new bridge near the KSRTC bus stand in Bhadravati Nagar. The system of electric lights near the new bridge is not good. Due to this, it is becoming a serious problem for people and vehicle traffic at night. Citizens have also complained that the barrier of the bridge is not adequate.

Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Previous post shimoga rain | ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!
Shimoga - Contaminated drinking water : What is the serious allegation of Hitr Raksha Forum? ಶಿವಮೊಗ್ಗ – ಕಲುಷಿತ ಕುಡಿಯುವ ನೀರು ಪೂರೈಕೆ : ಹಿತರಕ್ಷಣಾ ವೇದಿಕೆಯ ಗಂಭೀರ ಆರೋಪವೇನು? Next post shimoga | ಶಿವಮೊಗ್ಗ – ಕಲುಷಿತ ಕುಡಿಯುವ ನೀರು : ಹಿತರಕ್ಷಣಾ ವೇದಿಕೆಯ ಗಂಭೀರ ಆರೋಪವೇನು?