shimoga | ಶಿವಮೊಗ್ಗ : ಕುಡಿಯುವ ನೀರು ಪೂರೈಕೆ ಬಗ್ಗೆ ದೂರುಗಳಿವೆಯೇ? ಜಲ ಮಂಡಳಿ ಸಲಹೆಯೇನು?

Disruption in drinking water supply in Shivamogga city on May 5-6 ಶಿವಮೊಗ್ಗ ನಗರದಲ್ಲಿ ಮೇ 5 - 6 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಿವಮೊಗ್ಗ (shivamogga), ನ. 8: ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಅಡಚಣೆ / ಕುಂದುಕೊರತೆಗಳಿದ್ದಲ್ಲಿ, ಶಿವಮೊಗ್ಗ ನಗರದ ಸಾರ್ವಜನಿಕರು ದೂರು ದಾಖಲಿಸುವ ವ್ಯವಸ್ಥೆಯನ್ನು ಜಲ ಮಂಡಳಿ ಆಡಳಿತ ಆರಂಭಿಸಿದೆ.

ಈ ಕುರಿತಂತೆ ಜಲ ಮಂಡಳಿ ಆಡಳಿತವು ಶುಕ್ರವಾರ ಮಾಹಿತಿ ನೀಡಿದೆ. ನೀರು ಪೂರೈಕೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182 – 273000 ಮತ್ತು ವಾಟ್ಸಾಪ್ ಸಂಖ್ಯೆ : 76195-55584 ಕ್ಕೆ ದೂರುಗಳನ್ನು ದಾಖಲಿಸಬಹುದು ಎಂದು ನಾಗರೀಕರಿಗೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಕಚೇರಿಯ ನಿರಂತರ ನೀರು ಸರಬರಾಜು ಯೋಜನೆಯ ಗ್ರಾಹಕರ ಸೇವಾ ಕೇಂದ್ರ ಸಂಪರ್ಕಿಸಬಹುದೆಂದು ಜಲ ಮಂಡಳಿಯ ನಿರ್ವಹಣೆ ಮತ್ತು ಪಾಲನೆ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →