
shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
ಶಿವಮೊಗ್ಗ (shivamogga), ಡಿ. 23: ಪ್ರತ್ಯೇಕ ಘಟನೆಗಳಲ್ಲಿ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಕಣ್ಮರೆಯಾಗಿದ್ದಾರೆ. ಇವರ ಪತ್ತೆಗೆ ಸಹಕರಿಸುವಂತೆ, ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ನಾಗರೀಕರಿಗೆ ಮನವಿ ಮಾಡಿದೆ.
ಪ್ರಕರಣ 1 : ಚನ್ನಗಿರಿ ತಾಲೂಕು ಉಬ್ರಾಣಿ ಹೋಬಳಿಯ ತಾವರೆಕೆರೆ ಗ್ರಾಮದ ವಾಸಿ ಓಂಕಾರಪ್ಪ ಎಂಬುವವರ ಮಗ ದಿಲೀಪ್ (35 ವರ್ಷ) ಎಂಬುವರು ನಾಪತ್ತೆಯಾಗಿದ್ದಾರೆ. ಅ. 14 ರಂದು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರು ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ.
ವ್ಯಕ್ತಿಯ ಚಹರೆ – ಸುಮಾರು 5.7 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕಪ್ಪು ಬಿಳಿ ಕುರುಚಲು ಗಡ್ಡ ಬಿಟ್ಟಿರುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬ ತೋಳಿನ ಶರ್ಟ್, ಹಸಿರು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಎಡಕಾಲಿನ ಹೆಬ್ಬೆಟ್ಟು ಅರ್ಧ ತುಂಡಾಗಿರುತ್ತದೆ.
ಈ ವ್ಯಕ್ತಿಯ ಸುಳಿವು ಲಭ್ಯವಾದರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.
ಪ್ರಕರಣ 2 : ನಗರದ ಸಾಗರ ರಸ್ತೆಯಲ್ಲಿರುವ ಸತ್ಯಂ ಫೋರ್ ವಿಂಗ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಹಾಲನಾಯ್ಕ ಬಿನ್ ನಾಗ್ಯನಾಯ್ಕ (48 ವರ್ಷ) ಎಂಬುವರು, ಡಿ. 03 ರಂದು ಕೆಲಸಕ್ಕೆಂದು ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ.
ವ್ಯಕ್ತಿಯ ಚಹರೆ – ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಗಡ್ಡ ಮೀಸೆ ಬಿಟ್ಟಿರುತ್ತಾರೆ. ಬಲಗಾಲಿಗೆ ಗಾಯವಾಗಿದ್ದು, ಸ್ವಲ್ಪ ಕುಂಟುತ್ತಾ ನಡೆಯುತ್ತಾರೆ. ಕಾಣೆಯಾಗುವ ಸಂದರ್ಭದಲ್ಲಿ ಕೆಂಪು ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್, ನೀಲಿ ಬಣ್ಣದ ಪಂಚೆ ಧರಿಸಿರುತ್ತಾರೆ.
ಇವರು ಸುಳಿವು ಪತ್ತೆಯಾದರೆ ಜಯನಗರ ಪೋಲಿಸ್ ಠಾಣೆ ಸಂಖ್ಯೆ 08182-261416/ 261413/261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.
In separate incidents, two persons have gone missing from Doddpet Police Station and Jayanagar Police Station in Shimoga city. In a press release, the police department appealed to the public to help trace him.