new year 2025 | New Year celebration: Rules must be followed - otherwise the case will fall! ಹೊಸ ವರ್ಷಾಚರಣೆ : ನಿಯಮ ಪಾಲನೆ ಕಡ್ಡಾಯ – ಇಲ್ಲದಿದ್ದರೆ ಬೀಳುತ್ತೆ ಕೇಸ್!

shimoga new year 2025 | ಹೊಸ ವರ್ಷಾಚರಣೆ : ನಿಯಮ ಪಾಲನೆ ಕಡ್ಡಾಯ – ಇಲ್ಲದಿದ್ದರೆ ಬೀಳುತ್ತೆ ಕೇಸ್!

ಶಿವಮೊಗ್ಗ(shivamogga), ಡಿ. 26: ಹೊಸ ವರ್ಷಾಚರಣೆ – 2025 ಕ್ಕೆ ಸಂಬಂಧಿಸಿದಂತೆ, ಡಿ. 26 ರಂದು ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅಧ್ಯಕ್ಷತೆಯಲ್ಲಿ ಹೋಂ ಸ್ಟೇ, ಹೋಟೆಲ್, ಲಾಡ್ಜ್, ರೆಸಾರ್ಟ್ ಮಾಲೀಕರ ಸಭೆ ನಡೆಸಲಾಯಿತು.

ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ವೇಳೆ ಅನುಸರಿಸಬೇಕಾದ ನಿಯಮಗಳ ಕುರಿತಂತೆ ಮಾಹಿತಿ ನೀಡಲಾಯಿತು. ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ.

ಸೂಚನೆಯಗಳೇನು? : ಯಾವುದೇ ಕಾರ್ಯಕ್ರಮ ಆಯೋಜಿಸುವ  ಪೂರ್ವದಲ್ಲಿ, ಸರಹದ್ದಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.  ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸುವಂತಿಲ್ಲ.

ಕಾರ್ಯಕ್ರಮ ಆಯೋಜಿಸುವವರು ಸ್ಥಳಾವಕಾಶಕ್ಕೆ ಅನುಗುಣವಾಗಿ, ಜನರಿಗೆ ಅನುಮತಿ ನೀಡಬೇಕು. ಕಾರ್ಯಕ್ರಮಕ್ಕೆ  ಎಷ್ಟು ಜನ ಸೇರುತ್ತಾರೆ ಮತ್ತು ಆ ಸಂಖ್ಯೆಗೆ  ಅನುಗುಣವಾಗಿ ಕೈಗೊಳ್ಳಲಾಗುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.

ಕಾರ್ಯಕ್ರಮದಲ್ಲಿ ಮದ್ಯಪಾನಕ್ಕೆ ಅವಕಾಶವಿದ್ದಲ್ಲಿ, ಅಬಕಾರಿ ಇಲಾಖೆ ಷರತ್ತುಗಳು ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ ಬೇರೆ ಚಾಲಕರ ಏರ್ಪಾಡು ಮಾಡಿ ಕಳುಹಿಸಿಕೊಡಬೇಕು. ಅಥವಾ ಅಲ್ಲಿಯೇ ವಾಸ್ತವ್ಯಕ್ಕೆ  ವ್ಯವಸ್ಥೆ ಮಾಡಬೇಕು.

ಹೊಸ ವರ್ಷದ ಆಚರಣೆಯನ್ನು ಮಧ್ಯ ರಾತ್ರಿ 12  ಗಂಟೆಗೆ ಆಚರಿಸಿದ ನಂತರ, ರಾತ್ರಿ 1 ಗಂಟೆಯೊಳಗಾಗಿ ಎಲ್ಲಾ ರೀತಿಯ ಹೊರಾಂಗಣ ಕಾರ್ಯಕ್ರಮ ಮುಕ್ತಾಯ ಮಾಡಬೇಕು.

ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. 200 ಕ್ಕಿಂತ ಹೆಚ್ಚಿನ ಸಾರ್ವಜನಿಕರು ಸೇರುವ ಸ್ಥಳದಲ್ಲಿ, ಕಡ್ಡಾಯವಾಗಿ ಸಿಸಿ ಟಿವಿ ಗಳನ್ನು ಅಳವಡಿಸಬೇಕು. ಮತ್ತು ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ / ಅತಿಥಿಗಳ ಹೆಸರು ಮತ್ತು ವಿವರ ನಮೂದಿಸಬೇಕು. ಯಾವುದಾದರೂ ಒಂದು ಗುರುತಿನ ಚೀಟಿ ಪಡೆದುಕೊಳ್ಳಬೇಕು.

ಕಾರ್ಯಕ್ರಮದ ಆಯೋಜಕರುಗಳು, ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ಒಳ ಬರುವ ಮತ್ತು ಹೊರ ಹೋಗುವ  ದ್ವಾರದಲ್ಲಿ ತಮ್ಮ ಸಿಬ್ಬಂಧಿಗಳನ್ನು ನೇಮಿಸಬೇಕು.  ಸಾರ್ವಜನಿಕರ ಸುರಕ್ಷತೆಯ ಬಗ್ಗೆ ನಿಗಾವಹಿಸಬೇಕು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಯಾವುದೇ ಸಣ್ಣ ಪುಟ್ಟ ಘಟನೆಗಳು ಜರುಗಿದ ಕೂಡಲೇ ನಿರ್ಲಕ್ಷ್ಯ ತೋರದೇ ಕೂಡಲೇ 112  ತುರ್ತು ಸಹಾಯವಾಣಿಗೆ ಕರೆ ಮಾಡಬೇಕು.

ಕಾರ್ಯಕ್ರಮದಲ್ಲಿ ಅಳವಡಿಸುವ ಧ್ವನಿವರ್ಧಕ,  ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ /  ತೊಂದರೆಯಾಗದ  ರೀತಿ ನೋಡಿಕೊಳ್ಳಬೇಕು. ಕಾರ್ಯಕ್ರಮ ಆಯೋಜನೆ ಸ್ಥಳದಲ್ಲಿ  ಈಜುಕೊಳ ಇದ್ದಲ್ಲಿ, ಆದ್ಯ ಗಮನಹರಿಸಬೇಕು. ಈಜುಕೊಳಕ್ಕೆ ಸಾರ್ವಜನಿಕರಿಗೆ ಅವಕಾಶವಿದ್ದಲ್ಲಿ, ನುರಿತ ಈಜು ತಜ್ಞರನ್ನು ನೇಮಿಸಬೇಕು. ಎಲ್ಲಾ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಸಭೆಯಲ್ಲಿ ಸದರಿ ಹೆಚ್ಚುವರಿ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ ಕಾರ್ಯಪ್ಪ ಡಿವೈಎಸ್ಪಿಗಳಾದ ಬಾಬು ಆಂಜನಪ್ಪ, ಸುರೇಶ್, ಪೊಲೀಸ್ ಉಪಾಧೀಕ್ಷಕರು, ಕೇಶವ್, ಗಜಾನನ ವಾಮನ ಸುತಾರ ಸೇರಿದಂತೆ ಮೊದಲಾದವರಿದ್ದರು.

Shimoga, D. 26: Regarding the New Year celebration – 2025, a meeting of home stay, hotel, lodge, resort owners was held under the chairmanship of SP GK Mithun Kumar at DAR hall in the city on December 26.

Information was given about the rules to be followed while planning the New Year program. The police department has warned that strict legal action will be taken against the violators.

shimoga | Notice to take action to control accidents in the 'black spots' of Shimoga district!shimoga | ಶಿವಮೊಗ್ಗ ಜಿಲ್ಲೆಯ ‘ಬ್ಲ್ಯಾಕ್ ಸ್ಪಾಟ್’ ಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸೂಚನೆ! Previous post shimoga | ಶಿವಮೊಗ್ಗ ಜಿಲ್ಲೆಯ ‘ಬ್ಲ್ಯಾಕ್ ಸ್ಪಾಟ್’ ಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಸೂಚನೆ!
Former Prime Minister Manmohan Singh's funeral: 7 days of mourning in the state - Government holiday declared on December 27 ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ : ರಾಜ್ಯದಲ್ಲಿ 7 ದಿನ ಶೋಕಾಚರಣೆ – ಡಿ. 27 ರಂದು ಸರ್ಕಾರಿ ರಜೆ ಘೋಷಣೆ Next post ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ : ರಾಜ್ಯದಲ್ಲಿ 7 ದಿನ ಶೋಕಾಚರಣೆ – ಡಿ. 27 ರಂದು ಸರ್ಕಾರಿ ರಜೆ ಘೋಷಣೆ