shiralkoppa | Shiralakoppa: Bike theft case - one arrested! shiralkoppa | ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣ – ಓರ್ವನ ಬಂಧನ!

shiralkoppa | ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣ – ಓರ್ವನ ಬಂಧನ!

ಶಿರಾಳಕೊಪ್ಪ (ಶಿಕಾರಿಪುರ), ಜ. 5: ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಸೊರಬ ತಾಲೂಕಿನ ಹುಣಸವಳ್ಳಿ ಗ್ರಾಮದ ನಿವಾಸಿ ವೀರಭದ್ರಪ್ಪ (40) ಬಂಧಿತ ಆರೊಪಿ ಎಂದು ಗುರುತಿಸಲಾಗಿದೆ. 4-1-2025 ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಆರೋಪಿ ಬಂಧನದಿಂದ ಶಿರಾಳಕೊಪ್ಪ ಹಾಗೂ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದೊಂದು ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.

60 ಸಾವಿರ ರೂ. ಮೌಲ್ಯದ ಸ್ಟಾರ್ ಸಿಟಿ ಬೈಕ್ ಹಾಗೂ 35 ಸಾವಿರ ರೂ. ಮೌಲ್ಯದ ಫ್ಯಾಷನ್ ಪ್ರೋ ಬೈಕ್ ನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಶಿಕಾರಿಪುರ ನಗರ ವೃತ್ತದ ಇನ್ಸ್’ಪೆಕ್ಟರ್ ರುದ್ರೇಶ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಪುಷ್ಪ ನೇತೃತ್ವದಲ್ಲಿ ಹೆಚ್ ಸಿ ಗಳಾದ ಸಂತೊಷ್ ಕುಮಾರ್, ಪಿಸಿಗಳಾದ ಸಲ್ಮಾನ್ ಖಾನ್, ಕಾರ್ತಿಕ್, ಕಾಂತೇಶ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೂರು ದಾಖಲು : 29-12-2024 ರಂದು ಹಿರೇಜಂಬೂರು ಗ್ರಾಮದ ವಾಸಿ ದೇವೆಂದ್ರಪ್ಪ ಎಂಬುವರು, ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ ನಲ್ಲಿ ಕಾರ್ಯನಿಮಿತ್ತ  ಶಿರಾಳಕೊಪ್ಪಕ್ಕೆ ಆಗಮಿಸಿದ್ದರು.

ಪಟ್ಟಣದ ಪುರಸಭೆ ಆವರಣದಲ್ಲಿ ಬೈಕ್ ಲಾಕ್ ಮಾಡಿ ನಿಲ್ಲಿಸಿ ತೆರಳಿದ್ದರು. ಈ ವೇಳೆ ನಕಲಿ ಕೀ ಬಳಸಿ ಬೈಕ್ ನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಶಿರಾಳಕೊ್ಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shiralakoppa (Shikaripur), january. 5: Shikaripura taluk Shiralakoppa police arrested a person on the charge of bike theft and seized two stolen bikes. After the arrest of the accused, one case of bike theft each in Shiralakoppa and Sagar Town Police Stations has come to light.

shikaripura | ಶಿಕಾರಿಪುರ : ಮನೆಯಲ್ಲಿ ಕಳವು ನಡೆಸಿದ್ದ ಆರೋಪಿ ಸೆರೆ – ಚಿನ್ನಾಭರಣ ವಶ! Shikaripura | Shikaripura: Accused of stealing at home arrested - gold jewelery seized! Previous post shikaripura | ಶಿಕಾರಿಪುರ : ಮನೆಯಲ್ಲಿ ಕಳವು ನಡೆಸಿದ್ದ ಆರೋಪಿ ಸೆರೆ – ಚಿನ್ನಾಭರಣ ವಶ!
Why did Siddaramaiah say that 'Politicians will be painted if they join for dinner'? ‘ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ…’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? Next post ‘ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ…’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?