shimoga | ಕುಡಿಯುವ ನೀರಿನ ಹಾಹಾಕಾರಕ್ಕೆ ಪರಿಹಾರ : ಪ್ರತಿಭಟನೆ ನಡೆಸದಿರಲು ನಿರ್ಧಾರ! shimoga | Solution to drinking water crisis: Decision not to protest!

shimoga | ಕುಡಿಯುವ ನೀರಿನ ಹಾಹಾಕಾರಕ್ಕೆ ಪರಿಹಾರ : ಪ್ರತಿಭಟನೆ ನಡೆಸದಿರಲು ನಿರ್ಧಾರ!

ಶಿವಮೊಗ್ಗ, ಜ. 9: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಅವರು ಭರವಸೆ ನೀಡಿದ್ದಾರೆ.

ಜ. 9 ರಂದು ಮಧ್ಯಾಹ್ನ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಅಹವಾಲು ಆಲಿಸಿದ ನಂತರ ಮಾತನಾಡಿದರು.

ಇಂದಿನಿಂದಲೇ ಓವರ್ ಹೆಡ್ ಟ್ಯಾಂಕ್ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ಟ್ಯಾಂಕ್ ದುರಸ್ತಿಯಾಗುವವರೆಗೂ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಸಿಸಿ ಕ್ಯಾಮರಾ ಅಳವಡಿಕೆ, ಚರಂಡಿ ಸ್ವಚ್ಛತೆ, ನಾಮಫಲಕಗಳ ದುರಸ್ತಿ ಕಾರ್ಯ ಸೇರಿದಂತೆ ನಾಗರೀಕರು ಮುಂದಿಟ್ಟಿರುವ ಎಲ್ಲ ಸಮಸ್ಯೆಗಳನ್ನು ಕೆಲ ದಿನಗಳಲ್ಲಿಯೇ ಪರಿಹರಿಸಲಾಗುವುದು ಎಂದು ಪಿಡಿಓ ರಾಜಪ್ಪ ಅವರು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ನಡೆಸಿದ ರಾಜಕಾಲುವೆ ಕಾಮಗಾರಿ ವೇಳೆ, ಕುಡಿಯುವ ನೀರಿನ ಪೈಪ್ ಲೈನ್ ಗೆ ಹಾನಿಯಾಗಿದ್ದು ಇಲ್ಲಿಯವರೆಗೂ ದುರಸ್ತಿಗೊಳಿಸಿಲ್ಲ. ಜೊತೆಗೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ. ಅಂದಾಜು ಪಟ್ಟಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಬೇಕು ಎಂದು ಇದೇ ವೇಳೆ ನಿವಾಸಿಗಳು ಪಿಡಿಓಗೆ ಮನವಿ ಮಾಡಿದ್ದಾರೆ.

ಮನವಿ ಅರ್ಪಿಸುವ ವೇಳೆ ಪತ್ರಕರ್ತರಾದ ಬಿ ರೇಣುಕೇಶ್, ಮಂಜುನಾಥ್, ಇಂದ್ರಮ್ಮ, ನಾಗರತ್ನ, ಅನುರಾಧ ಉಪಸ್ಥಿತರಿದ್ದರು.

ಪ್ರತಿಭಟನೆ ಎಚ್ಚರಿಕೆ : ಕಾಲೋನಿಯಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಪರಿಹಾರ ಕಲ್ಪಿಸುವಲ್ಲಿ ಗ್ರಾಪಂ ಹಾಗೂ ಜಲ ಮಂಡಳಿ ನಿರ್ಲಕ್ಷ್ಯವಹಿಸಿತ್ತು. ತಿಂಗಳುಗಳೇ ಕಳೆದರೂ ಸಮಸ್ಯೆ ಪರಿಹಾರವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕಪ್ಪು ಬಾವುಟ ಪ್ರದರ್ಶನ ಸೇರಿದಂತೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲು ಕೆಲ ನಿವಾಸಿಗಳು ನಿರ್ಧರಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಿಡಿಓ ರಾಜೀವ್ ಅವರು, ಕಾಲೋನಿಗೆ ಖುದ್ದಾಗಿ ಆಗಮಿಸಿ ನಿವಾಸಿಗಳ ಅಹವಾಲು ಆಲಿಸಿದ್ದಾರೆ.

ಕುಡಿಯುವ ನೀರಿನ ಹಾಹಾಕಾರಕ್ಕೆ ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಪಿಡಿಓ ಅವರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಪ್ರೆಸ್ ಕಾಲೋನಿ ಭಗತ್ ಸಿಂಗ್ ರಸ್ತೆ ನಿವಾಸಿ ನಾಗರತ್ನ ಅವರು ತಿಳಿಸಿದ್ದಾರೆ.

Shimoga, January 9: Shimoga Taluk Abbalagere Gram Panchayat PDO Rajeev has assured that action will be taken within the time limit to solve the problem of drinking water.

On January 9 afternoon, he spoke after listening to the complaints of the residents of KHB Press Colony of Basavangangur village. Over head tank repair work has started from today itself. He clarified that until the tank is repaired, action will be taken to supply drinking water through tankers.

Also, PDO Rajeev said that all the problems raised by the citizens, including installation of CC cameras, cleaning of drains, repair of name plates, will be solved within a few days. Journalists B Renukesh, Indramma, Nagaratna, Anuradha were present while submitting the petition.

Bengaluru: Six naxalites surrender in presence of CM! ಬೆಂಗಳೂರು : ಸಿಎಂ ಸಮ್ಮುಖದಲ್ಲಿ ಆರು ಜನ ನಕ್ಸಲೀಯರು ಶರಣು! Previous post ಬೆಂಗಳೂರು : ಸಿಎಂ ಸಮ್ಮುಖದಲ್ಲಿ ಆರು ಜನ ನಕ್ಸಲೀಯರು ಶರಣು!
shimoga | Illegal Sand Mining in Tungabhadra River: Shimoga Tahsildar Sudden Attack! Next post shimoga | ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ : ಶಿವಮೊಗ್ಗ ತಹಶೀಲ್ದಾರ್ ದಿಢೀರ್ ದಾಳಿ!