
shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ..!
ಶಿವಮೊಗ್ಗ (shivamogga), ಜ. 10: ಶಿವಮೊಗ್ಗ ನಗರದ ಶಾರದಮ್ಮ ಲೇಔಟ್ ಹಾಗೂ ಸೋಮಿನಕೊಪ್ಪ ಬಡಾವಣೆಯಲ್ಲಿ, ಜನ-ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಗುಂಡಿಗಳನ್ನು ಜಲ ಮಂಡಳಿ ಆಡಳಿತ ಕೊನೆಗೂ ಮುಚ್ಚಿಲಾರಂಭಿಸಿದೆ!
24X7 ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ – ದುರಸ್ತಿ ಕಾಮಗಾರಿಗೆಂದು ಸದರಿ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಇದು ನಾಗರೀಕರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು!
ಶಾರದಮ್ಮ ಲೇಔಟ್ ಹಾಗೂ ಸೋಮಿನಕೊಪ್ಪ ಬಡಾವಣೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಗುಂಡಿಗಳ ಕುರಿತಂತೆ, ‘ www.udayasaakshi.com ’ ನ್ಯೂಸ್ ವೆಬ್’ಸೈಟ್ ನಲ್ಲಿ ಜನವರಿ 8 ರಂದು ‘ಗುಂಡಿ ಗಂಡಾಂತರ – ಜೀವ ಬಲಿಗೆ ಕಾದಿದೆಯೇ ಜಲಮಂಡಳಿ?’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ವರದಿ ಪ್ರಕಟಗೊಂಡ ಬೆನ್ನಲ್ಲೆ, ಎಚ್ಚೆತ್ತುಕೊಂಡ ಜಲ ಮಂಡಳಿಯು ಎರಡು ಬಡಾವಣೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದೆ. ಶಾರದಮ್ಮ ಲೇಔಟ್ ನಲ್ಲಿ ಇಂದೂ ಕೂಡ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
‘ಸೋಮಿನಕೊಪ್ಪ ಬಡಾವಣೆಯಲ್ಲಿ 24*7 ಪೈಪ್ ಲೈನ್ ಹಾಕಿ ವರ್ಷಗಳೇ ಆಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ನೀರು ಪೂರೈಕೆಯಾಗಿಲ್ಲ. ಈ ನಡುವೆ ದುರಸ್ತಿ ಕಾಮಗಾರಿಗೆಂದು ಇತ್ತೀಚೆಗೆ ಬಡಾವಣೆಯ ಕೋಟೆಗಂಗೂರು ಮುಖ್ಯ ರಸ್ತೆಯಲ್ಲಿ ಬೃಹತ್ ಗುಂಡಿ ತೆಗೆಯಲಾಗಿತ್ತು.
ಆದರೆ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯೂ ಮಾಡಿರಲಿಲ್ಲ. ಇದರಿಂದ ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿತ್ತು. ಇದೀಗ ಜಲ ಮಂಡಳಿಯು ಗುಂಡಿ ಮುಚ್ಚುವ ಕಾರ್ಯ ನಡೆಸಿದೆ. ಕಾಲಮಿತಿಯೊಳಗೆ ಬಡಾವಣೆಗೆ 24*7 ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು’ ಎಂದು ಸೋಮಿನಕೊಪ್ಪದ ಯುವ ಮುಖಂಡ ಮುಸ್ಸೀಗೌಡ ಅವರು ಆಗ್ರಹಿಸಿದ್ದಾರೆ.
shimoga : In Sharadamma layout and Sominakoppa extension of Shimoga city, the water board administration has finally started closing the potholes which have become dangerous for people!
The pits were removed for 24X7 drinking water pipe line installation – repair work. But the buttons were left unclosed. It was dangerous for civilians!
Regarding the potholes in Sharadamma layout and Sominakoppa extension, a report was published on the news website ‘ www.udayasaakshi.com ‘ on January 8 under the title ‘Pothole danger – Jal Mandali waiting for life sacrifice?’