shimoga | Shimoga: Body of anonymous man found in Bhadra canal! shimoga | ಶಿವಮೊಗ್ಗ : ಭದ್ರಾ ನಾಲೆಯಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

shimoga | ಶಿವಮೊಗ್ಗ : ಭದ್ರಾ ನಾಲೆಯಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

ಶಿವಮೊಗ್ಗ (shivamogga), ಜ. 23: ನಗರದ ಹೊರವಲಯ ವೀರಭದ್ರ ಕಾಲೋನಿಯಿಂದ ಹೊನ್ನವಿಲೇ ಗ್ರಾಮದ ಮೂಲಕ  ಹಾದಹೋಗಿರುವ, ಭದ್ರಾ ನಾಲೆಯಲ್ಲಿ ಅನಾಮಧೇಯ ಪುರುಷನ ಶವ ಪತ್ತೆಯಾದ ಘಟನೆ ಜ. 21 ರಂದು ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಜ. 23 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತ ವ್ಯಕ್ತಿಗೆ ಸರಿಸುಮಾರು 65 ರಿಂದ 70 ವರ್ಷವಿದೆ. ಮೃತರ ಹೆಸರು, ವಿಳಾಸ ಸೇರಿದಂತೆ ವಾರಸುದಾರರ ಯಾವುದೇ ಸುಳಿವು ಲಭ್ಯವಾಗಿಲ್ಲ.

ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದೃಡವಾದ ಮೈಕಟ್ಟು, ಬೊಕ್ಕು ತಲೆ ಹೊಂದಿದ್ದು, ಮೈಮೇಲೆ ನೇರಳೆ ಬಣ್ಣದ ಚಡ್ಡಿ ಧರಿಸಿರುತ್ತಾರೆ.

ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಶಿವಮೊಗ್ಗ ಗ್ರಾಮಾಂತ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 08182- 261413/261418 ಅಥವಾ ಮೊಬೈಲ್ ಪೋನ್ ಸಂಖ್ಯೆ 9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga, January 23: On January 21, the dead body of an anonymous man was found in Bhadra Nale, which passes from Veerbhadra Colony on the outskirts of the city through Honnavileh village.

In this regard, the police department issued a press release on January 23. The deceased person is approximately 65 to 70 years old. No clue of the heirs including the name and address of the deceased is available.

The police release said that if there are any heirs of the deceased, please contact Shimoga rural police station telephone number 08182- 261413/261418 or mobile phone number 9480803332/9480803350.

shimoga | Laptop news for Shimoga Taluk College students is false: Social Welfare Department clarifies! shimoga | ಶಿವಮೊಗ್ಗ ತಾಲೂಕು ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸುದ್ದಿ ಸುಳ್ಳು : ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ! Previous post shimoga | ಶಿವಮೊಗ್ಗ ತಾಲೂಕು ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸುದ್ದಿ ಸುಳ್ಳು : ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ!
Fruit and flower show to catch the eye – Upland Handicraft Utsav to start from January 24 ಕಣ್ಮನ ಸೆಳೆಯಲಿದೆ ಫಲಪುಷ್ಪ ಪ್ರದರ್ಶನ – ಜ. 24 ರಿಂದ ಆರಂಭವಾಗಲಿದೆ ಮಲೆನಾಡ ಕರಕುಶಲ ಉತ್ಸವ Next post shimoga | ಶಿವಮೊಗ್ಗ : ಜ. 24 ರಿಂದ ಆರಂಭವಾಗಲಿದೆ ಮಲೆನಾಡ ಕರಕುಶಲ ಉತ್ಸವ