bengaluru | What is the government mandate to control harassment of micro finance institutions? bengaluru | ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರದ ಆದೇಶವೇನು?

bengaluru | ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರದ ಆದೇಶವೇನು?

ಬೆಂಗಳೂರು (bengaluru), ಫೆ. 14: ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದೆ.

ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ, ಮೈಕ್ರೋಫೈನಾನ್ಸ್ ಸಂಸ್ಥೆಗಳು – ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಮತ್ತು ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಆಧ್ಯಾದೇಶ ಜಾರಿಗೊಳಿಸಿದೆ. ಆದೇಶದ ಮುಖ್ಯಾಂಶಗಳು ಹೀಗಿವೆ.

ಭದ್ರತೆ ಪಡೆಯಬಾರದು : ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು. ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು.

ಈ ಆದೇಶವು ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೊಂದಾಯಿತ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂ ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ. ನೊಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ನಿಖರವಾಗಿ ಲಭ್ಯವಿಲ್ಲವಾದರೂ, ಅಂದಾಜು 40 ಸಾವಿರ ಕೋಟಿ ರೂ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಮೈಕ್ರೋಫೈನಾನ್ಸ್ ಸಂಸ್ಥೆಗಳು ತಾವು ವ್ಯವಹರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ನೊಂದಣಿಯಾಗುವುದು ಕಡ್ಡಾಯವಾಗಿದೆ. ಈ ಸಂಸ್ಥೆಗಳು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ ಹಾಗೂ ಸುಸ್ತಿ ಸಾಲಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು.

ತ್ರೈ ಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಲ್ಲಿಸದಿದ್ದರೆ 6 ತಿಂಗಳ ಕಾರಗೃಹ ವಾಸ ಅಥವಾ 10 ಸಾವರ ರೂ. ವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಯಾಗುತ್ತಾರೆ.

ವಿವಾದಗಳನ್ನು ಇತ್ಯರ್ಥಗಳನ್ನು ಒಂಬುಡ್ಸ್‍ಮನ್‍ಗಳನ್ನು ಸರ್ಕಾರ ಅಧಿಸೂಚನೆ ಮೂಲಕ ನೇಮಕ ಮಾಡುವ ಅಧಿಕಾರ ಹೊಂದಿರುತ್ತದೆ.

ಬಲವಂತದ ವಸೂಲಾತಿಗಳನ್ನು ಕೈಗೊಳ್ಳುವ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ, ಹತ್ತು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಗೃಹವಾಸ ಶಿಕ್ಷೆ ಹಾಗೂ 5 ಲಕ್ಷ ರೂ ವರೆಗೆ ವಿಧಿಸಬಹುದಾದ ಜುಲ್ಮಾನೆಗೆ ಒಳಪಡುತ್ತಾನೆ. ಈ ಅಪರಾಧಗಳು ಸಂಜ್ಞೆಯ  (ಕಾಗ್ನಿಜಿಬಲ್) ಹಾಗೂ ಜಾಮೀನು ರಹಿತ  (ನಾನ್ ಬೇಲೆಬಲ್) ಪ್ರಕರಣಗಳಾಗಿರುತ್ತವೆ. ಯಾವುದೇ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ನೊಂದಣಿ ಮಾಡಿಕೊಳ್ಳಲು ನಿರಾಕರಿಸಬಾರದು. ಪೊಲೀಸ್ ಉಪ ಅಧೀಕ್ಷಕ  (ಡಿವೈಎಸ್‍ಪಿ) ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಸ್ವತಃ  (ಸುಮೊಟೊ) ಪ್ರಕರಣ ದಾಖಲಿಸಬಹುದು. ಸರ್ಕಾರವು ಈ ಅಧ್ಯಾದೇಶದ ಅನುಷ್ಠಾನಕ್ಕೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ. ಈ ಆದೇಶದಿಂದ ಆರ್.ಬಿ.ಐ ಮತ್ತು ಕೇಂದ್ರ / ರಾಜ್ಯ ಸರ್ಕಾರಗಳಿಂದ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚಿಸಲು ಹಾಗೂ ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ನೀಡುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga | A temporary break in illegal sand looting after the case of the female officer: Does the administration need to wake up? shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರಕ ಅಕ್ರಮ ಮರಳು ಲೂಟಿಗೆ ತಾತ್ಕಾಲಿಕ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ? Previous post shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
Power outages in various parts of Shivamogga city on December 26th! ಶಿವಮೊಗ್ಗ ನಗರದ ವಿವಿಧೆಡೆ ಡಿಸೆಂಬರ್ 26 ರಂದು ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ಕಲ್ಲಳ್ಳಿ ಸುತ್ತಮುತ್ತ ಫೆ.15 ರಂದು ವಿದ್ಯುತ್ ವ್ಯತ್ಯಯ