A special operation to stick reflector stickers on vehicles was conducted by the police on Feb 24 in various parts of the district including Shivamogga city to control accidents. shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೇನು?

shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೇನು?

ಶಿವಮೊಗ್ಗ (shivamogga), ಫೆ. 25: ಅಪಘಾತಗಳ ನಿಯಂತ್ರಣಕ್ಕಾಗಿ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ವಿಶೇಷ ಕಾರ್ಯಾಚರಣೆಯನ್ನು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಫೆ. 24 ರಂದು ಪೊಲೀಸರು ನಡೆಸಿದ್ದಾರೆ.

ಈ ಕುರಿತಂತೆ ಫೆ. 25 ರಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆ ನಡೆಸಲಾಯಿತು.

ರಾತ್ರಿ ವೇಳೆ ಸರಕು ಸಾಗಾಣೆ ವಾಹನಗಳು, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ವಾಹನಗಳ ಗೋಚರತೆ ಹೆಚ್ಚಿಸಲು ಸದರಿ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆಸಲಾಯಿತು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 43, ಭದ್ರಾವತಿ ಉಪ ವಿಭಾಗದಲ್ಲಿ 14, ಸಾಗರ ಉಪ ವಿಭಾಗದಲ್ಲಿ 50, ಶಿಕಾರಿಪುರ ಉಪ ವಿಭಾಗದಲ್ಲಿ 58 ಸೇರಿದಂತೆ ಒಟ್ಟಾರೆ 165 ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಲಾಯಿತು ಎಂದು ತಿಳಿಸಿದೆ.

ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವುದರಿಂದ, ಚಾಲಕರಿಗೆ ಮುಂದೆ ಹೋಗುತ್ತಿರುವ ಹಾಗೂ ಮುಂಭಾಗದಿಂದ ಆಗಮಿಸುವ ವಾಹನಗಳ ಗೋಚರತೆ ಹೆಚ್ಚಾಗುತ್ತದೆ. ಇದರಿಂದ ವಾಹನಗಳ ಅಸ್ಪಷ್ಟ ಗೋಚರತೆಯಿಂದ ಉಂಟಾಗಬಹುದಾದ ಅಪಘಾತಗಳ ನಿಯಂತ್ರಣ ಸಾಧ್ಯವಾಗುತ್ತದೆ.

ಈ ಕಾರಣದಿಂದ ಪ್ರತಿಯೊಂದು ವಾಹನಗಳ ಚಾಲಕರು, ತಮ್ಮ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಬೇಕು. ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Shivamogga, Feb 25: A special operation to stick reflector stickers on vehicles was conducted by the police on Feb 24 in various parts of the district including Shivamogga city to control accidents. The District Police Department has issued a press release in this regard on February 25. In order to control accidents and in the interest of the public, an operation was conducted to stick reflector stickers on vehicles.

The police department has informed that a special operation was conducted in all the police stations of the district to increase the visibility of heavy vehicles including cargo vehicles, lorries and tractors at night.

shimoga | Life imprisonment for three who killed a woman and stole gold jewelry! shimoga | ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಮೂವರಿಗೆ ಜೀವಾವಧಿ ಶಿಕ್ಷೆ! Previous post shimoga | ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಮೂವರಿಗೆ ಜೀವಾವಧಿ ಶಿಕ್ಷೆ!
Shimoga: The case of three dead bodies found in Tunga Dam backwater – what is the police announcement? shimoga | ಶಿವಮೊಗ್ಗ : ಮೂವರ ಶವ ಪತ್ತೆ ಪ್ರಕರಣ – ಪೊಲೀಸ್ ಪ್ರಕಟಣೆಯೇನು? Next post shimoga | ಶಿವಮೊಗ್ಗ : ಮೂವರ ಶವ ಪತ್ತೆ ಪ್ರಕರಣ – ಪೊಲೀಸ್ ಪ್ರಕಟಣೆಯೇನು?