shimoga | ಶಿವಮೊಗ್ಗ : ಮೂವರ ಶವ ಪತ್ತೆ ಪ್ರಕರಣ – ಪೊಲೀಸ್ ಪ್ರಕಟಣೆಯೇನು?
ಶಿವಮೊಗ್ಗ (shivamogga), ಫೆ. 25: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಸಮೀಪದ 10 ನೇ ಮೈಲಿಗಲ್ಲು ಬಳಿಯ ತುಂಗಾ ನದಿ ಹಿನ್ನಿರಿನಲ್ಲಿ, ಇಬ್ಬರು ಪುರುಷ ಹಾಗೂ ಓರ್ವ ಮಹಿಳೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಫೆ. 25 ರಂದು ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ.
ತುಂಗಾ ನದಿ ಹಿನ್ನೀರಿನಲ್ಲಿ ತೇಲುತ್ತಿದ್ದ ಇಬ್ಬರು ಪುರುಷರ ಹಾಗೂ ಓರ್ವ ಮಹಿಳೆಯ ಶವ ಪತ್ತೆಯಾಗಿದೆ. ಮೃತರ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ ಎಂದು ಮಾಹಿತಿ ನೀಡಿದೆ.
ಚಹರೆ : ಓರ್ವ ಪುರುಷನ ವಯಸ್ಸು ಸುಮಾರು 38-40 ವರ್ಷವಿದೆ. ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಾಪಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮತ್ತೋರ್ವ ಪುರುಷನ ವಯಸ್ಸು ಸುಮಾರು 40 ರಿಂದ 42 ವರ್ಷವಿದೆ. ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ನೀಲಿ, ತಿಳಿ ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮಹಿಳೆಗೆ ಸುಮಾರು 40 ರಿಂದ 45 ವರ್ಷವಿದೆ. ದುಂಡು ಮುಖ ಹೊಂದಿದ್ದು, ನೀಲಿ, ಹಸಿರು ಮತ್ತು ಕೆಂಪು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಗಳ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ ದೂ.ಸಂ.: 9141289308/ 9480803370/ 9480803377 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿ : ಮತ್ತೊಂದೆಡೆ ಸಕ್ರೆಬೈಲು ಹೋಟೆಲ್ ವೊಂದರ ಸಮೀಪ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿರುವ ಪೊಲೀಸರು ಆ ನಿಟ್ಟಿನಲ್ಲಿಯೂ ಮೃತರ ಪೂರ್ವಾಪರ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.
Shimoga, Feb 25: The police department issued a statement on Feb 25 regarding the discovery of dead bodies of two men and a woman in the backwaters of the Tunga river near the 10 th milegallu near Sakrebailu in Shimoga taluk.
The bodies of two men and a woman were found floating in the backwaters of the Tunga river. It has been informed that there is no clue about the name, address and heirs of the deceased. If the heirs of the dead persons are found, contact Tunganagar Police Station Phone No.: 9141289308/ 9480803370/ 9480803377.
