Massive operation by Sagar Anandpur police station: 12 house burglaries uncovered! sagara | ಸಾಗರ ಆನಂದಪುರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ : 12 ಮನೆಗಳ್ಳತನ ಕೃತ್ಯಗಳು ಬೆಳಕಿಗೆ!

sagara | ಸಾಗರ ಆನಂದಪುರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ : 12 ಮನೆಗಳ್ಳತನ ಕೃತ್ಯಗಳು ಬೆಳಕಿಗೆ!

ಸಾಗರ (sagar), ಮಾ. 7: ಜಿಲ್ಲೆಯ ವಿವಿಧೆಡೆ ನಡೆದ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದಆರೋಪಿ ಹಾಗೂ ಕಳವು ಮಾಡಿದ್ದ ಆಭರಣ ಖರೀದಿಸುತ್ತಿದ್ದ ಚಿನ್ನಬೆಳ್ಳಿ ತಯಾರಿಸುವ ವ್ಯಕ್ತಿ ಸೇರಿದಂತೆ, ಇಬ್ಬರನ್ನು ಸಾಗರ ತಾಲೂಕಿನ ಆನಂದಪುರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಹೊಸನಗರ ತಾಲೂಕು ಬಸವಾಪುರ ಗ್ರಾಮದ ಹಾರೋಹಿತ್ಲು ನಿವಾಸಿಯಾದ, ವ್ಯವಸಾಯ ಕೆಲಸ ಮಾಡುವ ಅಶೋಕಕ್ಕೆ (42) ಹಾಗೂ ಶಿವಮೊಗ್ಗ ತಾಲೂಕು ಹಾರನಹಳ್ಳಿ ಗ್ರಾಮದ ನಿವಾಸಿ, ಚಿನ್ನಬೆಳ್ಳಿ ತಯಾರಿಸಿ ಕೊಡುವ ಕೆಲಸ ಮಾಡುವ ಚಂದ್ರ ಯಾನ ಚಂದ್ರಹಾಸ್ (33) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಸದರಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದ 4 ಪ್ರಕರಣ, ರಿಪ್ಪನ್ ಪೇಟೆ ಟಾಣೆಯ 5, ಸಾಗರ ಪೇಟೆ ಠಾಣೆ, ಹೊಸನಗರ ಠಾಣೆ ಹಾಗೂ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದೊಂದು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಒಟ್ಟಾರೆ 30,96,000 ರೂ. ಮೌಲ್ಯದ 387 ಗ್ರಾಂ ತೂಕದ ಚಿನ್ನಾಭರಣ, 27,688 ರೂ. ಮೌಲ್ಯದ 380 ಗ್ರಾಂ ತೂಕದ ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಕೆಯಾದ ಎರಡು ಬೈಕ್ ಗಳು ಸೇರಿದಂತೆ ಒಟ್ಟಾರೆ 32,23,688 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ, ಸಾಗರ ಗ್ರಾಮಾಂತರ ಪೊಲೀಸ್ ವೃತ್ತದ ಇನ್ಸ್‌ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕರ್ ಯುವರಾಜ್ ಕೆ, ಸಿಬ್ಬಂದಿಗಳಾದ ಅಶೋಕ್, ಪರಶುರಾಮ್, ಉಮೇಶ್ ಲಮಾಣಿ, ಸಂತೋಷ್ ಕುಮಾರ್, ನೂತನ್, ನಿರಂಜನ್, ಸುಬ್ರಮಣ್ಯ, ಭರತ್ ಕುಮಾರ್, 

ವಾಹನ ಚಾಲಕರಾದ ನರಸಿಂಹ ಸ್ವಾಮಿ, ಸತೀಶ್ ಹಾಗೂ ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ವಿಜಯಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Sagar Mar 7: Anandpur police station in Sagar taluk arrested two people, including the accused involved in house burglaries that took place in various parts of the district and a goldsmith who was buying stolen jewelry.

The arrested accused have been involved in 4 cases of housebreaking reported under the jurisdiction of Anandpur Police Station, 5 cases under the jurisdiction of Rippanpet Police Station, and one case each under the jurisdiction of Sagar town Police Station, Hosanagar Police Station, and Malur Police Station.

shimoga | ‘Guarantees will not stop Gruhalakshmi scheme dues will be credited to the account soon!’: What did the chairman of the Shimoga District Authority say? shimoga | ‘ಗ್ಯಾರಂಟಿಗಳು ನಿಲ್ಲುವುದಿಲ್ಲ ಗೃಹಲಕ್ಷ್ಮೀ ಬಾಕಿ ಹಣ ಶೀಘ್ರ ಖಾತೆಗೆ!’ : ಶಿವಮೊಗ್ಗ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು? Previous post shimoga | ‘ಗ್ಯಾರಂಟಿಗಳು ನಿಲ್ಲುವುದಿಲ್ಲ, ಗೃಹಲಕ್ಷ್ಮೀ ಬಾಕಿ ಹಣ ಶೀಘ್ರ ಖಾತೆಗೆ!’ : ಶಿವಮೊಗ್ಗ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದೇನು?
ರಣ ಬಿಸಿಲಿಗೆ ಮಲೆನಾಡು ಅಕ್ಷರಶಃ ಬಿಸಿಯಾಗಲಾರಂಭಿಸಿದೆ..! ಹೌದು. ಪ್ರಸ್ತುತ ಬೇಸಿಗೆ ತಾಪಕ್ಕೆ, ಶಿವಮೊಗ್ಗ ಜಿಲ್ಲೆಯ ನಾಗರೀಕರು ತತ್ತರಿಸಿದ್ದಾರೆ. ಹೈರಾಣಾಗುವಂತೆ ಮಾಡಿದೆ!! ಜಿಲ್ಲೆಯ ಇತರೆಡೆಯಂತೆ, ಶಿವಮೊಗ್ಗ ನಗರದಲ್ಲಿಯೂ ತಾಪಮಾನದ ಪ್ರಮಾಣ ತೀವ್ರ ಸ್ವರೂಪದಲ್ಲಿದೆ. ಹಗಲು ವೇಳೆ ಇಡೀ ನಗರ ಕಾದ ಕಾವಲಿಯಂತಾಗಿ ಪರಿವರ್ತಿತವಾಗುತ್ತಿದೆ. ಮನೆಯಿಂದ ಹೊರಬರಲಾಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿರುವುದು, ನಾಗರೀಕರನ್ನು ಕಂಗಲಾಗಿಸಿದೆ. ಎದುಸಿರು ಹೆಚ್ಚಾಗುವಂತೆ ಮಾಡಿದೆ. Next post shimoga | ಏರುತ್ತಿರುವ ರಣ ಬಿಸಿಲು : ನಾಗರೀಕರಿಗೆ ಶಿವಮೊಗ್ಗ ಡಿಸಿ ನೀಡಿದ ಮಹತ್ವದ ಸಲಹೆಯೇನು?