What did Dr. Dhananjay Sarji say about the increasing stress and TV-mobile phone addiction in children? ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ, ಟಿವಿ – ಮೊಬೈಲ್ ಪೋನ್ ವ್ಯಸನದ ಬಗ್ಗೆ ಡಾ.ಧನಂಜಯ್ ಸರ್ಜಿ ಹೇಳಿದ್ದೇನು?

legislative council | ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ, ಟಿವಿ – ಮೊಬೈಲ್ ಪೋನ್ ವ್ಯಸನದ ಬಗ್ಗೆ ಡಾ. ಧನಂಜಯ್ ಸರ್ಜಿ ಹೇಳಿದ್ದೇನು?

ಬೆಂಗಳೂರು (bangalore), ಮಾ. 12: ಪ್ರಸ್ತುತ ಹದಿಹರೆಯದ ಮಕ್ಕಳಲ್ಲಿ ಒತ್ತಡ ಬಹಳ ಇದೆ. ಪೋಷಕರು ಮಕ್ಕಳು ಅಂಕಪಟ್ಟಿಯಲ್ಲಿ ಗಳಿಸುವ ಅಂಕಗಳ ಹಿಂದೆ ಬಿದ್ದಿದ್ದಾರೆ. ಅಂಕಗಳಿಗೋಸ್ಕರ ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಮಕ್ಕಳಲ್ಲಿ ತಾಳ್ಮೆ, ಸಹನೆ ಕಳೆದು ಹೋಗಿತ್ತಿದೆ. ಪಠ್ಯೇತರ ಚಟುವಟಿಕೆಗಳು ಕಡಿಮೆಯಾಗಿ ಪಠ್ಯ ಚಟುವಟಿಕೆಗಳು ಜಾಸ್ತಿ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ತಿಳಿಸಿದ್ದಾರೆ.  

ಮಕ್ಕಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ನಡೆಯುತ್ತಿರುವ 155 ನೇ ವಿಧಾನಪರಿಷತ್ ಕಲಾಪದಲ್ಲಿ ಶಾಲಾ ಕಾಲೇಜುಗಳಲ್ಲಿ ಜಾರಿಗೆ ತರಬೇಕಾದ ನಿಯಮಗಳು ಹಾಗು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಚ್ 11 ರಂದು ಸುದೀರ್ಘವಾಗಿ ಡಾ. ಧನಂಜಯ ಸರ್ಜಿ ಮಾತನಾಡಿದ್ದಾರೆ.

ಬಲಗಡೆ ಕೈ ಅಲ್ಲಿ ಬರೆಯುವಂತಹ ಮಕ್ಕಳಲ್ಲಿ ಎಡಗಡೆ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಎಡಗಡೆ ಮೆದುಳಿನ ಹೆಚ್ಚು ಒತ್ತಡ ಯಾಕೆ ಬೀಳೋದು ಯಾಕೆ ಅಂದ್ರೆ, 24 ಗಂಟೆಗಳಲ್ಲಿ 9 ಗಂಟೆ ಶಾಲೆಗೆ ಹೋಗುತ್ತಾರೆ. 3ಗಂಟೆ ಟ್ಯೂಷನ್’ಗೆ ಹೋಗ್ತಾರೆ. 8 ಗಂಟೆ ನಿದ್ದೆ ಮಾಡ್ತಾರೆ. ಉಳಿಯೋದು ಕೇವಲ 4 ಗಂಟೆ. ಈ 4 ಗಂಟೆಯಲ್ಲಿ ಊಟ ಮಾಡಬೇಕು, ತಿಂಡಿ ಮಾಡಬೇಕು, ಬೇರೆ ಚಟುವಟಿಕೆಗಳನ್ನು ಮಾಡಬೇಕು. ಇದರಲ್ಲಿ ಹೆಚ್ಚು ಒತ್ತಡ ಬರವುದು ಓದಿನಲ್ಲಿ. ಒಳ್ಳೆಯ ಸಂಸ್ಕಾರ ಮತ್ತು ಒಳ್ಳೆಯ ಸಂಸ್ಕೃತಿ ಕಲಿಸುವುದಕ್ಕೆ ಈಗೀನ ಪೋಷಕರಿಗೆ ಸಮಯವಿಲ್ಲ. ಸಂಸ್ಕಾರ ಜೀವನದಲ್ಲಿ ಬಹಳ ಮುಖ್ಯ ಆಗುತ್ತೆ ಎಂದರು.

ಮೆಮೊರಿ ಪವರ್ ಹೆಚ್ಚಿಸುವುದಕ್ಕೆ ಎಸ್.ಕ್ಯೂ.ತ್ರೀ.ಆರ್ ವಿಧಾನ ಬಳಸಿ : ಎಡಗಡೆ ಮೆದುಳಿಗೆ ಒತ್ತಡ ಹೆಚ್ಚಾಗುತ್ತಿದೆ. ಆ ಒತ್ತಡ ಕಡಿಮೆ ಆಗಬೇಕು. ಸುಲಭ ಆಗಬೇಕು ಅಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದುವ ವಿಧಾನವನ್ನು ಕೂಡ ನಾವು ಮಕ್ಕಳಿಗೆ ಕಲಿಸಬೇಕಾಗುತ್ತದೆ. ಅದಕ್ಕಾಗಿ ನಾವು ಎಸ್.ಕ್ಯೂ.ತ್ರೀ.ಆರ್ ವಿಧಾನವನ್ನು ನಾವು ಬಳಸಬೇಕಾಗುತ್ತದೆ “ಎಸ್” ಅಂದ್ರೆ ಸ್ಕ್ರೀನಿಂಗ್, ಐದು ಪೇಜಿನ ಪಠ್ಯ ಪುಸ್ತಕ ಇದ್ರೆ ಒಂದು ಸಲ ಹೆಡ್ಡಿಂಗ್, ಕಾಲಮ್ಸ್ ಮತ್ತು ಡಯಾಗ್ರಾಮ್ ಮಾತ್ರ ಓದಬೇಕು,

“ಕ್ಯೂ” ಅಂದ್ರೆ ಕ್ಯೋಷನಿಂಗ್  ಪಾಠವನ್ನು ಓದುವ ಮೊದಲು ಆ ಪಾಠದಲ್ಲಿ ಕ್ಯೋಷನ್ ಏನ್ ಇದೆ ಅಂತ ಓದ್ಕೊಬೇಕು. ಕ್ಯೋಷನಿಂಗ್ ಓದಿದ ಮೇಲೆ ಮೂರೂ ಆರ್ ಗಳನ್ನೂ ಪಾಲಿಸಬೇಕು. ಮೂರೂ ಆರ್ ಅಂದ್ರೆ ರೀಡ್, ರಿಸೈಟ್, ರಿವೈಸ್ ಈ ವಿಧಾನವನ್ನು ಉಪಯೋಗಿಸಿದರೆ ಮಕ್ಕಳ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಮೆಮೊರಿ ಪವರ್ ಕೂಡ ಚೆನ್ನಾಗಾಗುತ್ತೆ. ಎಲ್ಲ ಶಾಲೆಗಳಲ್ಲೂ ಈ ವಿಧಾನ ಬಳಸಿದರೆ ವಿದ್ಯಾರ್ಥಿಗಳ ಮಾರ್ಕ್ಸ್ ಕೂಡ ಚೆನ್ನಾಗಿ ಬರುತ್ತದೆ ಎಂದು ತಿಳಿಸಿದ್ದಾರೆ.

ಮೆಮೊರಿ ಪವರ್ ಗೆ  3 ವಿಧಾನ ಅನುಸರಿಸಿ : ಕಲಿಯೋ ಕಲಿಕೆಯಲ್ಲೂ ಕೂಡ ಮೂರೂ ತರಹದ ವಿಧಾನ ಇದೆ. ಈ ವಿಧಾನದಲ್ಲಿ ಯಾವ ಮಕ್ಕಳಿಗೆ ಯಾವ ರೀತಿ ಉಪಯೋಗ ಆಗುತ್ತೆ ಅಂತ ನಾವು ಮಕ್ಕಳಿಗೆ ಹೇಳಿಕೊಡಬೇಕಾಗುತ್ತದೆ. 1. ವಿಷುಯಲ್ ಮೆಮೊರಿ – ಓದಿ ಕಲಿಯುವುದು. 2. ಅಡ್ರಿಟ್ರೀಮಲ್ ಮೆಮೊರಿ – ಕೇಳಿ ಕಲಿಯೋದು. 3. ಕೈನೆಸ್ಟಿಕ್ ಮೆಮೊರಿ – ಬರೆದು ಕಲಿಯೋದು, ಕೇಳಿ ಕಲಿ,  ನೋಡಿ ಕಲಿ, ಬರೆದು ಕಲಿ ಈ ಮೂರರಲ್ಲಿ ಯಾವ ತರಹದ ಕಲಿಕೆಗೆ ನಾವು ಒತ್ತು ಕೊಡಬೇಕು ಅನ್ನುವುದನ್ನು ನಾವು ತಿಳಿದುಕೊಂಡು ಮಕ್ಕಳಿಗೆ ಕಲಿಸಬೇಕು. ಈ ವಿಧಾನದಲ್ಲಿ ಮಕ್ಕಳಿಗೆ ಎಡಗಡೆ ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.

ಎಡಗಡೆ ಮೆದುಳಿನ ಸಮವಾಗಿ ಬಲಗಡೆ ಮೆದುಳು ಕೆಲಸ ಮಾಡಿದರೆ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ‘ಓದು ಒಕ್ಕಾಲು-ಬುದ್ದಿ ಮುಕ್ಕಾಲು, ಓದು ಕೆಲಸ ಮಾಡ್ತು-ಬುದ್ದಿ ದೇಶ ಆಳ್ತು” ಅಂತ. ಜೀವನದಲ್ಲಿ ಓದು ಕೇವಲ 25% ಮಾತ್ರ ಆದರೆ ಬುದ್ದಿ 75% ಬಲಗಡೆ ಮೆದುಳು ಸುಧಾರಣೆ ಆಗಬೇಕು ಅಂದರೆ ಎಸ್.ಕ್ಯೂ.ತ್ರೀ.ಆರ್, ಮೆಮೊರಿ ಪವರ್ ಗೆ  3 ವಿಧಾನ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ 45 ನಿಮಿಷ ಪಠ್ಯೇತರ ಚಟುವಟಿಕೆಗಳಿಗಾಗಿ ಮೀಸಲೀಡಬೇಕು.

ಹೀಗೆ ಮಾಡುವುದರಿಂದ ಬಲಗಡೆ ಮೆದುಳು ಕೂಡ ಸುಧಾರಣೆ ಆಗುತ್ತದೆ ಎಡಗಡೆ ಮೆದುಳು ಮತ್ತು ಬಲಗಡೆ ಮೆದುಳು ಸಮಾನವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಚೆನ್ನಗಾಗುತ್ತದೆ.

ಮಕ್ಕಳಲ್ಲಿ ಒತ್ತಡ ನಿರ್ವಹಣೆ ಹೇಗೆ? : ಚಿತೆ ಸುಟ್ಟ ಮೇಲೆ ಸುಟ್ಟರೆ, ಚಿಂತೆ ಬದುಕಿದ್ದಾಗಲೇ ಸುಡುತ್ತದೆ, ಈ ಚಿಂತೆಯಿಂದ, ಒತ್ತಡದಿಂದ ಮಕ್ಕಳು ಹೊರಬರಬೇಕು ಅಂದರೆ ಇವತ್ತಿನ ಮಕ್ಕಳಲ್ಲಿ ತಾಳ್ಮೆ ತುಂಬಾ ಕಡಿಮೆ ಇದೆ.  ಹಿಂದೆ ನಾವೆಲ್ಲ ಗಾಂಧಿ ಕ್ಲಾಸ್ ನಲ್ಲಿ ಕುಳಿತು ಸಿನಿಮಾ ನೋಡ್ತಾ ಇದ್ವಿ, ನೀರಿಗಾಗಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಮನೆಗೆ ನೀರು ತರುತ್ತಾ ಇದ್ವಿ, ನಮ್ಮ ತಾಯಿ ಪಾತ್ರ ಬರೆದರೆ ಮರುಪತ್ರ ಬರುವವರೆಗೂ ವಾರಗಟ್ಟಲೆ ಕಾಯುವ ತಾಳ್ಮೆ ಇತ್ತು. ಹಾಗಾಗಿ ಮಕ್ಕಳಲ್ಲಿ ತಾಳ್ಮೆ, ಒತ್ತಡ ನಿವಾರಣೆ ಆಗಬೇಕು ಅಂದರೆ ಶಾಲಾ ಕಾಲೇಜುಗಳಲ್ಲಿ 20ರಿಂದ 30 ನಿಮಿಷ ಯೋಗ ಕಡ್ಡಾಯ ಮಾಡಬೇಕು ಎಂದು ಹೇಳಿದರು.

ಮಕ್ಕಳಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಬೇಕು  : ಮಕ್ಕಳಿಗೆ ದಿನನಿತ್ಯ ಪ್ರಾರ್ಥನೆ ಮಾಡುವುದನ್ನು ಅಭ್ಯಾಸ ಮಾಡಿಸಬೇಕು, ಯಾಕೆ ಪ್ರಾರ್ಥನೆ ಮಾಡಿಸಬೇಕು  ನಮ್ಮಲ್ಲಿ ಕಾನ್ಷಿಯಸ್ ಬ್ರೈನ್ ಮತ್ತು ಸಬ್ ಕಾನ್ಷಿಯಸ್ ಬ್ರೈನ್ ಸಬ್ ಕಾನ್ಷಿಯಸ್ ಬ್ರೈನ್ ಅತ್ಯಂತ ಪವರ್ ಫುಲ್ ಬ್ರೈನ್ ದಿನದ ಚಟುವಟಿಕೆಗಳಲ್ಲಿ ಶೇ 95 ರಷ್ಟು ಕೆಲಸ  ಮಾಡುವುದು ಸಬ್ ಕಾನ್ಷಿಯಸ್ ಬ್ರೈನ್, ನಾವು ಪ್ರಾರ್ಥನೆ ಮಾಡುವುದು ಕೂಡ ಸಬ್ ಕಾನ್ಷಿಯಸ್ ಬ್ರೈನ್ ನಿಂದ ಹಾಗಾಗಿ ಮಕ್ಕಳಿಗೆ ಪ್ರಾರ್ಥನೆ ಮಾಡುವುದು ಕೂಡ ಅಭ್ಯಾಸ ಮಾಡುವುದು ಮುಖ್ಯ.

ಮಕ್ಕಳಲ್ಲಿ ಟಿ.ವಿ ಮೊಬೈಲ್ ದೂರವಿರಿಸುವುದು ಹೇಗೆ? : ಮಕ್ಕಳಲ್ಲಿ ಹೆಚ್ಚುತ್ತಿರುವ ಟಿ.ವಿ ಮೊಬೈಲ್ ದುಶ್ಚಟದಿಂದ ಹೊರಬರಬೇಕಾದರೆ ಮೊದಲು ಪೋಷಕರು ಮಕ್ಕಳ ಎದುರು ಟಿ.ವಿ ನೋಡುವುದು, ಮೊಬೈಲ್ ಬಳುಸುವುದು ಕಡಿಮೆ ಮಾಡಬೇಕು, ಯಾಕೆಂದರೆ ಮಕ್ಕಳು ಪೋಷಕರು ಮಾಡುವುದನ್ನು ನೋಡಿ ಕಲಿಯುವುದು ಹೆಚ್ಚು, ಇನ್ನೊಂದು ಪುಸ್ತಕಗಳನ್ನು ಓದುವುದನ್ನು ಕಲಿಸಬೇಕು 30 ಪುಟ ಓದಿ್ದರೇ ಅವರ ಇಷ್ಟವಾದ ವಸ್ತುವನ್ನು ಕೊಡಿಸುವುದಾಗಿ ತಿಳಿಸಬೇಕು, ದಿನದಲ್ಲಿ ಎಷ್ಟು ಬಾರಿ ಮೊಬೈಲ್ ಬಳುಸತ್ತಾರೆ ಅನ್ನುವುದನ್ನು ಗಮನಿಸಬೇಕು ಎಂದು ಹೇಳಿದರು.

ಮಕ್ಕಳನ್ನು  ದುಶ್ಚಟದಿಂದ  ದೂರವಿರಿಸುವುದು ಹೇಗೆ? : ಹದಿಹರೆಯದ ಮಕ್ಕಳು ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಕಲಿಯುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ  ಪ್ರತಿದಿನ ಡಾಕ್ಯುಮೆಂಟ್ ಬರೆಯುವ ಅಭ್ಯಾಸವನ್ನು ಶಾಲೆಗಳಲ್ಲಿ ರೂಢಿಗೆ ತರಬೇಕು, ದಿನಕ್ಕೆ ಒಂದು ನೀತಿಕಥೆಗಳನ್ನು ಓದುವ ಅಥವಾ ಹೇಳುವ ಅಭ್ಯಾಸವನ್ನು ಬೆಳಸಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಸೈಕಲಾಜಿಕಲ್ ಕೌನ್ಸೆಲಿಂಗ್, ಮಕ್ಕಳ ಸಮಾಲೋಚನೆ, ಸ್ತ್ರೀ ರೋಗ ತಜರಿಂದ ಸಮಾಲೋಚನೆಯನ್ನು ಶಿಕ್ಷಣ ಇಲಾಖೆಯಿಂದ ನಡೆಸಬೇಕು ಎಂದು ಹೇಳಿದರು.  ಇವುಗಳನ್ನು ಶಾಲಾ-ಕಾಲೇಜುಗಳಲ್ಲಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

Children are losing patience and tolerance. Extracurricular activities have decreased and curricular activities have increased, said Dr. Dhananjaya Sarji, a child expert and also a member of the Legislative Council.

Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ! Previous post shimoga | anandpura | ಅಪರಿಚಿತ ಮಹಿಳೆ ಶವ ಪತ್ತೆ : ಬಲಗೈ ಮೇಲಿದೆ ಮುರುಗೇಶ್ ಹೆಸರಿನ ಹಚ್ಚೆ ಗುರುತು!
shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Next post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಮಾ. 14 ರಂದು ವಿದ್ಯುತ್ ವ್ಯತ್ಯಯ