Shivamogga | 20 years rigorous imprisonment: Rs. 75 thousand fine! ಶಿವಮೊಗ್ಗ | 20 ವರ್ಷ ಕಠಿಣ ಜೈಲು ಶಿಕ್ಷೆ : 75 ಸಾವಿರ ರೂ. ದಂಡ!

shimoga | ಶಿವಮೊಗ್ಗ : ಯುವಕನ ಕೊಲೆ ಪ್ರಕರಣ – ಓರ್ವನಿಗೆ ಜೀವಾವಧಿ ಶಿಕ್ಷೆ!

ಶಿವಮೊಗ್ಗ (shivamogga), ಮಾ. 13: ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಓರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿವಮೊಗ್ಗ ನಗರದ ಎ ಎ ಕಾಲೋನಿ ನಿವಾಸಿ ಅನಿಲ್ ಕುಮಾರ್ ಕೆ (27) ಶಿಕ್ಷೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ದಂಡದ ಮೊತ್ತದಲ್ಲಿ ಪರಿಹಾರ ರೂಪವಾಗಿ ಕೊಲೆಗೀಡಾದ ಯುವಕನ ತಂದೆಗೆ 25 ಸಾವಿರ ರೂ. ನೀಡುವಂತೆ, ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡನೆ ಮಾಡಿದ್ದರು.

ಪ್ರಕರಣದ ಹಿನ್ನೆಲೆ : 14-10-2021  ರ ರಾತ್ರಿ ಶಿವಮೊಗ್ಗದ ಬಾಪೂಜಿ ನಗರದ ಗಂಗಾಮತ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ, ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ಸಂತೋಶ್ ಪಿ.ಕೆ. (30) ಎಂಬಾತನ ಕೊಲೆ ಮಾಡಲಾಗಿತ್ತು.

ಪ್ರಸ್ತುತ ಶಿಕ್ಷೆಗೊಳಗಾದ ಅಪರಾಧಿ ಅನಿಲ್ ಕುಮಾರ್ ಹಾಗೂ ಆತನ ಸಹಚರರು  ಹಳೇಯ ವೈಷಮ್ಯದ ಹಿನ್ನೆಲೆಯಲ್ಲಿ, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಮೃತ ಸಂತೋಷ್ ಪಿ ಕೆ  ತಂದೆಯು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತಂತೆ ಗುನ್ನೆ ಸಂಖ್ಯೆ 0130/2021 ಕಲಂ 302 ಐಪಿಸಿ ರೀತ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಇನ್ಸ್’ಪೆಕ್ಟರ್ ಚಂದ್ರಶೇಖರ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga (shivamogga) Mar. 13: The Principal District and Sessions Court of Shivamogga has sentenced a person to life imprisonment in connection with the murder case of a young man.

Anil Kumar K (27), a resident of AA Colony, Shivamogga city, has been identified as the convicted youth. In addition to the sentence, a fine of Rs. 50 thousand has been imposed. In case of failure to pay the fine, an additional 6 months of simple imprisonment has been ordered.

shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Previous post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಮಾ. 14 ರಂದು ವಿದ್ಯುತ್ ವ್ಯತ್ಯಯ
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ಮಾ. 14 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!