shimoga | Solar Ramesh passes away: Organ donation A family that showed humanity even in death shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!                    

shimoga | ಅಂಗಾಂಗ ದಾನ : ಶೋಕದಲ್ಲಿಯೂ ಮಾನವೀಯತೆ ಮೆರೆದ ಕುಟುಂಬ!

ಶಿವಮೊಗ್ಗ (shivamogga), ಮಾ. 15: ಮೆದುಳು ನಿಷ್ಕ್ರೀಯವಾದ ವ್ಯಕ್ತಿಯೊಬ್ಬರ ಅಂಗಾಂಗ ದಾನದ ಮೂಲಕ ಅವರ ಕುಟುಂಬ ದುಃಖದ ನಡುವೆಯೂ ಮಾನವೀಯತೆಯನ್ನು ಮೆರೆದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಕೃಷಿನಗರ 1 ನೇ ತಿರುವಿನ ನಿವಾಸಿ ಎಸ್.ಸಿ. ರಮೇಶ್ (52) ರವರು ಮಾ.10 ರ ಸಂಜೆ ಏಕಾಎಕಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಪ್ರಯತ್ನಿಸಲಾಗಿದೆ.

ಆದರೆ ಮೆದುಳಿನಲ್ಲಿ ರಕ್ತಸ್ರಾವವಾಗಿ ರಮೇಶ್‌ರವರ ದೇಹ ಯಾವುದೇ ಔಷದಿಗೂ ಸ್ಪಂದಿಸದಿದ್ದರಿಂದ ಉಳಿಯುವ ಸಾಧ್ಯತೆ ಇಲ್ಲ. ಮೆದುಳು ನಿಷ್ಕ್ರೀಯವಾಗಿದೆ ಎಂಬ ಘೋಷಣೆಯನ್ನು ವೈದ್ಯರು ಮಾಡಿದ್ದರು.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಮೇರೆಗೆ ಅವರ ಪತ್ನಿ ಸವಿತಾ, ಪುತ್ರ ನಿಶ್ಚಿತ್ ಹಾಗೂ ಕುಟುಂಬದವರು ಮಾನವೀಯತೆ ಮೆರೆದು ರಮೇಶ್‌ರವರ ಅಂಗಾಗ ದಾನಕ್ಕೆ ಮುಂದಾದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಗೆ ಇವರ  ಅಂಗಾಗಗಳನ್ನು ಮಾ. 14 ರ ನಿನ್ನೆ 10 ರಿಂದ 12 ಜನರಿಗೆ ದಾನವಾಗಿ ನೀಡಲಾಯಿತು.

ಸೋಲಾರ್ ರಮೇಶ್ ಎಂದೇ ಶಿವಮೊಗ್ಗದಲ್ಲಿ ಹೆಸರಾಗಿದ್ದ ರಮೇಶ್ ಸಾವಿನಲ್ಲೂ ಹತ್ತಾರು ಜನರ ಜೀವನಕ್ಕೆ ಸಹಕಾರಿಯಾಗಿ ಜೀವನ ಸಾರ್ಥಕತೆ ಮೆರೆದಿದ್ದಾರೆ.

ಅಂತ್ಯಕ್ರಿಯೆ : ಮೃತರ ಅಂತ್ಯಕ್ರಿಯೆ ಮಾ. 15 ರ ಮಧ್ಯಾಹ್ನ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ರಮೇಶ್‌ರವರ ನಿಧನಕ್ಕೆ ಹಾಗೇ ಸುಮ್ಮನೇ ಗೆಳೆಯರ ಬಳಗ ಸಂತಾಪ ಸೂಚಿಸಿದೆ.

Shivamogga, March 15: A brain-dead man’s organ donation has shown humanity to his family despite their grief. S C Ramesh (57), a resident of Krushinagar 1 st crpss, collapsed on the evening of March 10 and was immediately admitted to a private hospital for treatment. His organs were donated to 10 to 12 people at Manipal Hospital in Bengaluru on March 14.

shimoga | Shivamogga: Recruitment under NREGA scheme - Applications invited from eligible candidates shimoga | ಶಿವಮೊಗ್ಗ : ನರೇಗಾ ಯೋಜನೆಯಡಿ ನೇಮಕ - ಅರ್ಹರಿಂದ ಅರ್ಜಿ ಆಹ್ವಾನ Previous post shimoga | ಶಿವಮೊಗ್ಗ : ನರೇಗಾ ಯೋಜನೆಯಡಿ ನೇಮಕ – ಅರ್ಹರಿಂದ ಅರ್ಜಿ ಆಹ್ವಾನ
shimoga | Shivamogga: Demand for implementation of drinking water project! shimoga | ಶಿವಮೊಗ್ಗ : ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹ! Next post shimoga | ಶಿವಮೊಗ್ಗ : 24X7 ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಆಗ್ರಹ!