
shimoga | ಶಿವಮೊಗ್ಗ : ಮಿತಿಮೀರಿದ ಅಕ್ರಮ ಚಟುವಟಿಕೆಗಳ ತಡೆಗೆ ಆಗ್ರಹಿಸಿ ಶಾಸಕರಿಂದ ಎಸ್ಪಿಗೆ ಮನವಿ!
ಶಿವಮೊಗ್ಗ (shivamogga), ಮಾ. 28: ಹೊಳೆಹೊನ್ನೂರು ಹಾಗೂ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜೂಜಾಟ, ಗಾಂಜಾ ಮಾರಾಟ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್ ಹಾಗೂ ಬಿಜೆಪಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾ. 28 ರಂದು ಶಿವಮೊಗ್ಗ ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಶಾರದಾ ಪೂರ್ಯನಾಯ್ಕ್ ಹಾಗೂ ಡಾ. ಧನಂಜಯ ಸರ್ಜಿ ಅವರು ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದ್ದಾರೆ.
ನಂತರ ಡಾ. ಧನಂಜಯ ಸರ್ಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭದ್ರಾವತಿ, ಹೊಳೆಹೊನ್ನೂರು ಮತ್ತುಆನವೇರಿ ಭಾಗಗಳಲ್ಲಿ ಜೂಜು, ಗಾಂಜಾ ಮಾರಾಟ, ಓ.ಸಿ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಇತ್ತೀಚಿಗೆ ಓ.ಸಿ, ಇಸ್ಪೀಟ್ ಅಲ್ಲದೆ ಆನ್ಲೈನ್ ಜೂಜುಗಳು ಕೂಡ ಹೆಚ್ಚಾಗಿದೆ. ಯುವಕರು ಇದರ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿಗಳನ್ನೂ ಕಳೆದುಕೊಳ್ಳುತ್ತಿದ್ದಾರೆ.
ಸಾಕಷ್ಟು ಜನ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆಗಳು ಕೂಡ ನಡೆದಿವೆ. ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಸಂದರ್ಭದಲ್ಲಿ, ಯುವಕರು ಈ ಚಟಗಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಬೇಸರ ತರಿಸುತ್ತಿದೆ ಎಂದು ತಿಳಿಸಿದ್ದಾರೆ.
ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡುವ ಸಂದರ್ಭದಲ್ಲೂ 200 ರಿಂದ 300 ರೂ. ದಂಡ ಕಟ್ಟಿಸಿಕೊಂಡು ಬಿಡುತ್ತಿದ್ದಾರೆ. ಹಾಗಾಗಿ ಎಸ್.ಪಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೆವೆ. ಎಸ್.ಪಿ ಅವರು ಕೂಡ ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದಾಗಿ ಹಾಗೂ ಕಿಂಗ್ ಪಿನ್ ಗಳನ್ನೂ ಮೊದಲು ಹಿಡಿದು ಗಡಿಪಾರು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯ ನಾಯ್ಕ್ ಮಾತನಾಡಿ, ಹೊಳೆಹೊನ್ನೂರು ಮತ್ತು ಆನವೇರಿ ಭಾಗಗಳಲ್ಲಿ ಓ.ಸಿ, ಇಸ್ಪೀಟ್, ಜೂಜು ಹಾವಳಿ ಹೆಚ್ಚಾಗಿದೆ. ಸಾಕಷ್ಟು ಯುವಕರು ಲಕ್ಷಾಂತರ ರೂ. ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಮತ್ತು ಆನವೇರಿ ಗ್ರಾಮಸ್ಥರೊಂದಿಗೆ ಎಸ್.ಪಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದೇವೆ. ಯುವ ಪೀಳಿಗೆಯನ್ನು ಇವುಗಳ ಚಟಕ್ಕೆ ದೂಡಿ ಹಾಳು ಮಾಡುವುದಕ್ಕೆ ಕೆಲವೊಂದು ತಂಡಗಳು ನಮ್ಮ ಭಾಗಗಳಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಎಸ್.ಪಿ ಅವರು ಕೂಡ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.
Shivamogga, Mar. 28: Shivamogga Rural JDS MLA Sharada Pooryanaik and BJP Legislative Council member Dr. Dhananjaya Sarji have urged the police department to take strict action to prevent gambling, sale of ganja, and IPL cricket betting rackets in the Holehonnur and Anaveri Zilla Panchayat limits.
In this regard, on March 28, Sharada Pooryanaik and Dr. Dhananjaya Sarji, along with the public, presented a petition to SP GK Mithun Kumar at the sp office in Shivamogga city.