'I will not leave the JDS party for any reason': Shivamogga Rural MLA Sharada Pooryanaik's response to Minister Madhu Bangarappa's Congress invitation ‘ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯಲ್ಲ’ : ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್

shimoga | ‘ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯಲ್ಲ’ : ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್

ಶಿವಮೊಗ್ಗ (shivamogga), ಮಾ. 29: ‘ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯಲ್ಲ. ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ’ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯ್ಕ್ ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ, ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾರದ ಪೂರ್ಯನಾಯ್ಕ್ ಅವರಿಗೆ ಬಹಿರಂಗವಾಗಿಯೇ ಆಹ್ವಾನ ನೀಡಿದ್ದರು.

ಈ ಕುರಿತಂತೆ ಮಾ. 29 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ಯನಾಯ್ಕ್ ಅವರು, ‘ಮಧು ಬಂಗಾರಪ್ಪ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ ಕರೆ ನೀಡುತ್ತಿದ್ದಾರೆ. ಅವರೇನೂ ಹೊಸದಾಗಿ ಹೇಳುತ್ತಿಲ್ಲ. ತಮ್ಮ ಮೇಲಿರುವ ವಿಶ್ವಾಸದಿಂದ ಈ ರೀತಿ ಹೇಳುತ್ತಿರುತ್ತಾರೆ.

ಆದರೆ ತಾವು ಮಾತ್ರ ಜೆಡಿಎಸ್ ಪಕ್ಷ ತೊರೆಯುವುದಿಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೆನೆ’ ಎಂದು ಶಾರದ ಪೂರ್ಯನಾಯ್ಕ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಅಕ್ರಮ ಚಟುವಟಿಕೆಗಳು ಮಿತಿಮೀರಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಲಾಗಿದೆ. ಅವರು ಕೂಡ ಕಾಲಮಿತಿಯೊಳಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಭರವಸೆ ನೀಡಿದ್ದಾರೆ ಎಂದರು.

ಕ್ಷೇತ್ರ ವ್ಯಾಪ್ತಿಯ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಗೃಹ ಮಂಡಳಿ ಬಡಾವಣೆಯಲ್ಲಿ, ಕುಡಿಯುವ ನೀರು ಪೂರೈಕೆ ಪೈಪ್ ಲೈನ್ ಅಳವಡಿಕೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಇದೇ ವೇಳೆ ಶಾರದ ಪೂರ್ಯನಾಯ್ಕ್ ಅವರು ತಿಳಿಸಿದ್ದಾರೆ.

Shivamogga, Mar. 29: ‘I am not leaving the JDS party for any reason. I will not join the Congress,’ MLA from Shivamogga Rural Assembly constituency Sharada Pooryanaik has clarified.

Recently, at a function held in Puradalu village in Shivamogga taluk, District In-charge Minister Madhu Bangarappa openly invited Sharada Pooryanaik, who was present at the function, to join the Congress party.

Speaking to reporters who contacted him on March 29, Pooryanaik said, “Madhu Bangarappa has been calling for joining the Congress party since the beginning. He is not saying anything new’

shimoga | ಶಿವಮೊಗ್ಗ ಬಸ್ ನಿಲ್ದಾಣ ಸುತ್ತಮುತ್ತ ದಿಢೀರ್ ದಾಳಿ : ದಂಡ ವಸೂಲಿ! Sudden raids around Shivamogga bus stand: Fines collected! Previous post shimoga | ಶಿವಮೊಗ್ಗ ಬಸ್ ನಿಲ್ದಾಣ ಸುತ್ತಮುತ್ತ ದಿಢೀರ್ ದಾಳಿ : ದಂಡ ವಸೂಲಿ!
Shivamogga - Harihar railway line should not be closed : Should the central and state governments take note? ಶಿವಮೊಗ್ಗ – ಹರಿಹರ ರೈಲ್ವೆ ಮಾರ್ಗ ಸ್ಥಗಿತವಾಗದಿರಲಿ : ಕೇಂದ್ರ, ರಾಜ್ಯ ಸರ್ಕಾರಗಳು ಗಮನಿಸಲಿ? Next post shimoga | ಶಿವಮೊಗ್ಗ : ರೈಲ್ವೆ ಅಂಡರ್ ಪಾಸ್’ಗೆ ಹೆಚ್ಚಿದ ಬೇಡಿಕೆ – ಗಮನಹರಿಸುವರೆ ಸಂಸದರು?