shimoga | ಶಿವಮೊಗ್ಗ ವಿನೋನಬಗರ ಠಾಣೆ ಇನ್ಸ್’ಪೆಕ್ಟರ್ ಸಸ್ಪೆಂಡ್!

Shivamogga: Children's open daycare center canceled - what is the reason? ಶಿವಮೊಗ್ಗ : ಮಕ್ಕಳ ತೆರೆದ ತಂಗುದಾಣ ಕೇಂದ್ರ ರದ್ದು – ಕಾರಣವೇನು?

ಶಿವಮೊಗ್ಗ (shivamogga), ಏ. 5: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಿ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ತವ್ಯಲೋಪದ ಆರೋಪದ ಮೇರೆಗೆ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳ ಹಿಂದೆಯೇ ಅಮಾನತ್ತು ಆದೇಶ ಹೊರಬಿದ್ದಿದೆ ಎಂದು ಹೇಳಲಾಗಿದೆ.

ಈದ್ಗಾ ಮೈದಾನ ವಿವಾದದ ನಂತರ ಎಸ್ಪಿ ಅವರು ಎಲ್ಲ ಇನ್ಸ್’ಪೆಕ್ಟರ್ ಹಾಗೂ ಸಬ್ ಇನ್ಸ್’ಪೆಕ್ಟರ್ ಗಳ ಸಭೆ ನಡೆಸಿದ್ದರು. ಸದರಿ ಸಭೆಗೆ ಸಕಾರಣವಿಲ್ಲದೆ ಚಂದ್ರಕಲಾ ಅವರು ಗೈರು ಹಾಜರಾಗಿದ್ದರು ಎನ್ನಲಾಗಿದೆ.

ಅವರ ಕರ್ತವ್ಯ ನಿರ್ವಹಣೆ ಕುರಿತಂತೆ ಕೆಲ ದೂರುಗಳು ಕೇಳಿಬಂದಿದ್ದವು. ಈ ಕುರಿತಂತೆ ಚಂದ್ರಕಲಾರವರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಪೂರ್ವ ವಲಯ ಐಜಿಪಿಗೆ, ಜಿಲ್ಲಾ ರಕ್ಷಣಾಧಿಕಾರಿಗಳು ವರದಿ ಕಳುಹಿಸಿದ್ದರು.

ಇದರ ಆಧಾರದ ಮೇಲೆ ಚಂದ್ರಕಲಾ ಅವರನ್ನು ಅಮಾನತ್ತುಗೊಳಿಸಿ ಐಜಿಪಿ ಆದೇಶಿಸಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Shivamogga, Apr. 5: It has been learned that Eastern Zone IGP Ravikanthe Gowda has issued an order suspending Inspector Chandrakala of Vinobanagar Police Station in Shivamogga.

Information has been received that Chandrakala has been suspended on charges of dereliction of duty. It is said that the suspension order was issued two days ago.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →