
Shimoga | SSLC Result | 625 ಕ್ಕೆ 625 ಅಂಕ ಗಳಿಸಿದ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು!
ಶಿವಮೊಗ್ಗ (shivamogga), ಮೇ 2: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು, ಏ. 2 ರಂದು 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ – 1 ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರೂರು ಶಿವಮೊಗ್ಗ ಜಿಲ್ಲೆಯು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಶಿವಮೊಗ್ಗ ಜಿಲ್ಲೆಯು ಶೇ. 82.29 ರಷ್ಟು ಫಲಿತಾಂಶ ಪಡೆದಿದೆ. ಪ್ರಸ್ತುತ ವರ್ಷ 21,873 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 17,999 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಮೂವರು ಟಾಪರ್ : ರಾಜ್ಯದಲ್ಲಿ ಒಟ್ಟಾರೆ 22 ವಿದ್ಯಾರ್ಥಿಗಳು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ. ಇದರಲ್ಲಿ ಶಿವಮೊಗ್ಗ ನಗರದ ವಿವಿಧ ಶಾಲೆಗಳ ಮೂವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಕೆ. ನಮನ, ನಿತ್ಯ ಎಂ ಕುಲಕರ್ಣಿ ಹಾಗೂ ಸಹಿಷ್ಣು ಎನ್ ಎಂಬುವರು ಔಟ್ ಆಫ್ ಔಟ್ ಅಂಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದ ವಿದ್ಯಾರ್ಥಿಗಳಾಗಿದ್ದಾರೆ.
ಡಿಡಿಪಿಐ ಹೇಳಿದ್ದೇನು? : ‘ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ 4 ನೇ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕೂಡ ಶೇ. 82 ರಷ್ಟು ಫಲಿತಾಂಶ ಜಿಲ್ಲೆ ಪಡೆದಿತ್ತು. ಗುಣಮಟ್ಟದ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಾಕಷ್ಟು ಸಲಹೆ – ಸೂಚನೆಗಳನ್ನು ನೀಡಿದ್ದರು.
ಅವರ ಮಾರ್ಗದರ್ಶನದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಕಾರ್ಯ ನಡೆಸಲಾಗಿತ್ತು. ಮುಂದಿನ ಬಾರಿಯು ಕೂಡ ಶಿವಮೊಗ್ಗ ಜಿಲ್ಲೆಯು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ದತೆಗಳನ್ನು ಪ್ರಾರಂಭಿಸಲಾಗಿದೆ.
ಈ ನಿಟ್ಟಿನಲ್ಲಿ ಇಂದು ಜಿಪಂ ಸಿಇಓ ಅವರು ಡಯಟ್ ನಲ್ಲಿ ಸಭೆ ನಡೆಸಿ ಅಗತ್ಯ ಸಲಹೆ – ಸೂಚನೆಗಳನ್ನು ನೀಡಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು’ ಎಂದು ಡಿಡಿಪಿಐ ಮಂಜುನಾಥ್ ಎಸ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
Shivamogga, May 2: The Karnataka School Examination and Evaluation Board has announced the SSLC – 1 examination results for the year 2024-25 on May 2. Shivamogga district, the hometown of Primary and Secondary Education Minister Madhu Bangarappa, has performed well in this year’s SSLC exams, securing fourth position in the state. Shivamogga district has achieved a pass rate of 82.29%. This year, 21,873 students appeared for the exam. 17,999 students have passed.
Three toppers: A total of 22 students in the state have scored 625 out of 625 marks. Three students from various schools in Shivamogga city have secured a place. K. Namana, Nithya M Kulkarni and Sahisnu N are the students who have caught everyone’s attention by scoring out of out marks.