Bhadravati: House theft case - accused arrested! bhadravati | ಭದ್ರಾವತಿ : ಮನೆಯಲ್ಲಿ ಕಳವು ಪ್ರಕರಣ - ಆರೋಪಿ ಬಂಧನ!

bhadravati | ಭದ್ರಾವತಿ : ಮನೆಯಲ್ಲಿ ಕಳವು ಪ್ರಕರಣ – ಆರೋಪಿ ಬಂಧನ!

ಭದ್ರಾವತಿ (bhadravathi), ಮೇ 5: ಮನೆಯೊಂದರಲ್ಲಿ ಚಿನ್ನಾಭರಣ – ನಗದು ಕಳವು ಮಾಡಿದ್ದ ಆರೋಪದ ಮೇರೆಗೆ, ಯುವಕನೋರ್ವನನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಭದ್ರಾವತಿ ನಗರದ ಮೀನುಗಾರರ ಬೀದಿಯ ನಿವಾಸಿ ಜೈಕಾಂತ್ ಪಿ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 1,12,200 ರೂ. ಮೌಲ್ಯದ 11 ಗ್ರಾಂ 300 ಮಿಲಿ ತೂಕದ ಬಂಗಾರದ ಆಭರಣ, ಒಂದು ವಾಚ್, 2 ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿ ಡಿವೈಎಸ್ಪಿ ನಾಗರಾಜ್, ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಟಿ ರಮೇಶ್ ನೇತೃತ್ವದಲ್ಲಿ ಎಎಸ್ಐ ಮಂಜಪ್ಪ, ಸಿಹೆಚ್’ಸಿ ನವೀನ್, ಸಿಪಿಸಿಗಳಾದ ನಾಗರಾಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.

ಪ್ರಕರಣದ ಹಿನ್ನಲೆ : 2-5-2024 ರಂದು ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೀನುಗಾರರ ಬೀದಿ ನಿವಾಸಿ ಬಾಲಕೃಷ್ಣನ್ ಎಂಬುವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಮನೆಯ ಮೇಲಿನ ಸಿಮೆಂಟ್ ಶೀಟ್ ಒಡೆದು ಒಳ ಪ್ರವೇಶಿಸಿದ್ದ ಆರೋಪಿಯು ಬಂಗಾರದ ಆಭರಣ, ನಗದು, ವಾಚ್ ಕಳವು ಮಾಡಿ ಪರಾರಿಯಾಗಿದ್ದ.

Bhadravati, May 5: A young man was arrested by the Bhadravati New Town police station on charges of stealing gold and cash from a house. The arrested accused has been identified as Jaikant P (21), a resident of Fishermen’s Street in Bhadravati Nagar. The police have seized 11 grams 300 milligram of gold jewellery worth Rs 1,12,200, Rs 2,000 cash and a watch from the arrested person.

Background of the case: On 2-5-2024, a theft took place at the house of Balakrishnan, a resident of Fisherman’s Street under the jurisdiction of New Town Police Station. The accused, who had broken the cement sheet on the house and entered, stole gold jewelry, cash, and a watch and fled.

shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 5 ರ ತರಕಾರಿ ಬೆಲೆಗಳ ವಿವರ
Rabies vaccination for street dogs in Shivamogga : will the municipal administration pay attention? shimoga | ಶಿವಮೊಗ್ಗದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ : ಕಾಟಾಚಾರದ ಶಿಬಿರ  - ಗಮನಿಸುವುದೆ ಪಾಲಿಕೆ ಆಡಳಿತ? Next post shimoga | ಶಿವಮೊಗ್ಗದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ : ಕಾಟಾಚಾರದ ಶಿಬಿರ  – ಗಮನಿಸುವುದೆ ಪಾಲಿಕೆ ಆಡಳಿತ?