Arrival of monsoon: Heavy rains in the Western Ghats! ಮುಂಗಾರು ಆಗಮನ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ!

shimoga rain alert | ಮುಂಗಾರು ಆಗಮನ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ!

ಶಿವಮೊಗ್ಗ (shivamogga), ಮೇ 25: ನಿಗದಿತ ಅವಧಿಗಿಂತ ಮೊದಲೇ ನೈರುತ್ಯ ಮಾನ್ಸೂನ್ ಮಾರುತಗಳ ಪ್ರವೇಶವಾಗಿದೆ. ಬೇಸಿಗೆ ಅವಧಿ ಪೂರ್ಣಕ್ಕೂ ಮೊದಲೇ, ಮಲೆನಾಡಿನಲ್ಲಿ ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಾರಂಭಿಸಿದೆ!

ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಹೊಸನಗರ ತಾಲೂಕಿನ ಘಟ್ಟ ವ್ಯಾಪ್ತಿಯ ಚಕ್ರಾದಲ್ಲಿ ಅತ್ಯದಿಕ 197 ಮಿ.ಮೀ (ಮಿಲಿ ಮೀಟರ್) ಮಳೆಯಾಗಿದೆ.

ಉಳಿದಂತೆ ಮಾಣಿ 129 ಮಿ.ಮೀ, ಯಡೂರು 100 ಮಿ.ಮೀ, ಹುಲಿಕಲ್ 179 ಮಿ.ಮೀ, ಮಾಸ್ತಿಕಟ್ಟೆ 154 ಮಿ.ಮೀ,  ಸಾವೇಹಕ್ಲುವಿನಲ್ಲಿ 184 ಮಿ.ಮೀ, ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 184 ಮಿ.ಮೀ ಮಳೆಯಾಗಿದೆ.

ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಚುರುಕುಗೊಂಡಿರುವುದರಿಂದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಕ್ರಮೇಣ ಏರಿಕೆ ಕಂಡುಬರಲಾರಂಭಿಸಿವೆ. ಹಳ್ಳಕೊಳ್ಳಗಳಲ್ಲಿಯೂ ನೀರಿನ ಸಂಗ್ರಹವಾಗಲಾರಂಭಿಸಿದೆ.

ಮತ್ತೊಂದೆಡೆ, ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳವರೆಗೆ ಮಲೆನಾಡು ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.

ಶಿವಮೊಗ್ಗ ವರದಿ : ಶಿವಮೊಗ್ಗ ನಗರದಲ್ಲಿಯೂ ಮಳೆ ಮುಂದುವರಿದಿದೆ. ಭಾನುವಾರ ಕೂಡ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆಯಾಗುತ್ತಿದೆ. ನಗರದ ತಾಪಮಾನದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಗಾಳಿಯ ತೀವ್ರತೆ ಹೆಚ್ಚಾಗಿದ್ದು, ತಣ್ಣನೆ ವಾತಾವರಣ ನೆಲೆಸಿದೆ.

Shivamogga, May 25: The southwest monsoon has arrived ahead of schedule. Even before the summer season ends, rains have intensified in the hilly areas. Heavy rains have started falling in the areas of the Western Ghats!

Chakra in the Ghatta range of Hosanagar taluk received a maximum of 197 mm (millimeters) of rainfall in the last 24 hours ending at 8 am on Sunday. The rest of the rainfall was recorded in Mani 129 mm, Yadoor 100 mm, Hulikal 179 mm, Mastikatte 154 mm, Savehaklu 184 mm, and Agumbe in Thirthahalli taluk 184 mm. #ಮುಂಗಾರುಮಳೆ, #ಮಳೆ, #ಮಲೆನಾಡು, #ಮಲೆನಾಡುಮಳೆ, #monsoonrain, #shimogarain, # mungarumale,

1000 cusecs of water released from Tunga Dam! ತುಂಗಾ ಡ್ಯಾಂನಿಂದ 1 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ! Previous post shimoga tunga dam | ಶಿವಮೊಗ್ಗ | ತುಂಗಾ ಡ್ಯಾಂನಿಂದ 1 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!
Sudden onset of monsoon rains : Summer paddy crop in Shivamogga district faces difficulties! ಮುಂಗಾರು ಮಳೆಯ ದಿಢೀರ್ ಎಂಟ್ರಿ : ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆ ಭತ್ತಕ್ಕೆ ಸಂಕಷ್ಟ! Next post rain alert | ಮುಂಗಾರು ಮಳೆಯ ದಿಢೀರ್ ಎಂಟ್ರಿ : ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆ ಭತ್ತಕ್ಕೆ ಸಂಕಷ್ಟ!