Shivamogga: PWD team inspects accident zones on state and district highways shimoga | ಶಿವಮೊಗ್ಗ : ಪಿಡಬ್ಲ್ಯೂಡಿ ತಂಡದಿಂದ ರಾಜ್ಯ - ಜಿಲ್ಲಾ ಹೆದ್ದಾರಿಗಳ ಅಪಘಾತ ವಲಯ ಪರಿಶೀಲನೆ

shimoga | ಶಿವಮೊಗ್ಗ : ಪಿಡಬ್ಲ್ಯೂಡಿ ತಂಡದಿಂದ ರಾಜ್ಯ – ಜಿಲ್ಲಾ ಹೆದ್ದಾರಿಗಳ ಅಪಘಾತ ವಲಯ ಪರಿಶೀಲನೆ

ಶಿವಮೊಗ್ಗ (shivamogga), ಮೇ 31: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಮೂಲಕ ಹಾದು ಹೋಗಿರುವ ರಾಜ್ಯ ಹಾಗೂ ಜಿಲ್ಲಾ ಹೆದ್ಧಾರಿಗಳ ಸಮೀಪದ ಶಾಲಾ ವಲಯವನ್ನು, ಪಿಡಬ್ಲ್ಯೂಡಿ ವಿಶೇಷ ವಿಭಾಗದ ಅಧಿಕಾರಿಗಳ ತಂಡ ಮೇ 31 ರ ಮಧ್ಯಾಹ್ನ ಪರಿಶೀಲನೆ ನಡೆಸಿತು.

ಕಾರ್ಯಪಾಲಕ ಅಭಿಯಂತರ (ಇ.ಇ) ವಿಜಯಕುಮಾರ್ ಅವರ ಸೂಚನೆಯ ಮೇರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ರಾದ ಭರ್ಮಪ್ಪ, ಸಹಾಯಕ ಎಂಜಿನಿಯರ್ (ಎಇ) ಗಳಾದ ಕೃಷ್ಣಾರೆಡ್ಡಿ, ದಿವ್ಯಾ ಅವರು ಹೆದ್ಧಾರಿಗಳ ಪರಿ ವೀಕ್ಷಣೆ ಮಾಡಿದರು.

ಸೋಮಿನಕೊಪ್ಪದ ರಾಜ್ಯ ಹಾಗೂ ಜಿಲ್ಲಾ ಹೆದ್ಧಾರಿಗಳಿಗೆ ಹೊಂದಿಕೊಂಡಂತೆ ಶಾಲೆಗಳಿವೆ. ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಶಾಲಾ ಮಕ್ಕಳು ಹೆದ್ಧಾರಿ ದಾಟಿ ಶಾಲೆ ಹಾಗೂ ಮನೆಗೆ ಓಡಾಡುವುದು ದುಸ್ತರವಾಗಿ ಪರಿಣಮಿಸಿದೆ.

ಶಾಲೆಗಳ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದ್ದರು. ಈ ಮನವಿಯ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ವಿಶೇಷ ವಿಭಾಗದ ಅಧಿಕಾರಿಗಳ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದೆ.

ಈ ವೇಳೆ ಎಇಇ ಭರ್ಮಪ್ಪ ಅವರು ಮಾತನಾಡಿ, ಶಾಲೆಗಳ ಸಮೀಪದ ಹೆದ್ದಾರಿಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ನಿಯಮಾನುಸಾರ ಅಗತ್ಯವಾದ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತ ಬಿ. ರೇಣುಕೇಶ್, ಯುವ ಮುಖಂಡ ಮುಸ್ಸೀಗೌಡ, ಗುರು ಚರಣ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shivamogga, May 31: A team of PWD special department officials inspected the school zone near the state and district highways passing through Sominakoppa on the outskirts of Shivamogga city on the afternoon of May 31.

There are schools along the state and district highways in Sominakoppa. Due to vehicles traveling at excessive speeds, it has become difficult for school children to cross the highway to go to school and home.

shimoga | Shivamogga | Protest against actor Kamal Haasan: Demand for action shimoga | ಶಿವಮೊಗ್ಗ | ನಟ ಕಮಲ್ ಹಾಸನ್ ವಿರುದ್ದ ಪ್ರತಿಭಟನೆ : ಕ್ರಮಕ್ಕೆ ಆಗ್ರಹ Previous post shimoga | ಶಿವಮೊಗ್ಗ | ನಟ ಕಮಲ್ ಹಾಸನ್ ವಿರುದ್ದ ಪ್ರತಿಭಟನೆ : ಕ್ರಮಕ್ಕೆ ಆಗ್ರಹ
ಕಳ್ಳತನ ಪ್ರಕರಣ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ – ಓರ್ವ ಅರೆಸ್ಟ್! Next post shikaripura | ಕಳ್ಳತನ ಪ್ರಕರಣ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ – ಓರ್ವ ಅರೆಸ್ಟ್!