
soraba | anavatti | ಮದ್ಯದ ಅಮಲಿನಲ್ಲಿ ಕತ್ತರಿಯಿಂದ ಇರಿದು ಅಳಿಯನ ಕೊ*ಲೆ ಮಾಡಿದ ಮಾವ!
ಸೊರಬ, ಜೂ. 7: ಮದ್ಯದ ಅಮಲಿನಲ್ಲಿ ಮಾವ ಹಾಗೂ ಅಳಿಯನ ನಡುವೆ ಏರ್ಪಟ್ಟ ಕಲಹ, ಅಳಿಯನ ಕೊ*ಲೆಯಲ್ಲಿ ಅಂತ್ಯಗೊಂಡ ಘಟನೆ ಸೊರಬ ತಾಲೂಕಿನ ಆನವಟ್ಟಿ ಸಮೀಪ ನಡೆದಿದೆ.
ರವೀಂದ್ರ (26) ಕೊಲೆಗೀಡಾದ ಅಳಿಯ. ಉಮೇಶ್ (46) ಆರೋಪಿತ ಮಾವನಾಗಿದ್ದಾನೆ. ಈತನನ್ನು ಆನವಟ್ಟಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಜೂ. 5 ರ ಗುರುವಾರ ಸಂಜೆ ಮಾವ ಹಾಗೂ ಅಳಿಯ ಇಬ್ಬರು ಜೊತೆಯಾಗಿ, ಮದ್ಯದ ಅಂಗಡಿಯಲ್ಲಿ ಮದ್ಯಪಾನ ಮಾಡಿದ್ದಾರೆ. ನಂತರ ಸಮೀಪದ ಹೋಟೆಲ್ ನಲ್ಲಿ ಊಟಕ್ಕೆ ತೆರಳಿದ್ದಾರೆ.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಹೋಟೆಲ್ ನಲ್ಲಿದ್ದ ಕತ್ತರಿ ತೆಗೆದುಕೊಂಡ ಆರೋಪಿ ಮಾವನು, ಅಳಿಯನ ಎದೆಗೆ ಇರಿದು ಪರಾರಿಯಾಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ರವೀಂದ್ರನನ್ನು ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಜೂ. 6 ರಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
Soraba (Anavatti), June 7: A quarrel between a father-in-law and his son-in-law under the influence of alcohol ended in tragedy near Anavatti in Soraba taluk.