Monsoon rains are back in full swing in the hills! ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು!

shimoga rain | ಮಾಣಿ 307, ಹುಲಿಕಲ್ 279, ಸಾವೆಹಕ್ಲು 262 ಮಿ.ಮೀ. ಭಾರೀ ಮಳೆ : ತುಂಗಾ, ಲಿಂಗನಮಕ್ಕಿ ಡ್ಯಾಂ ಒಳಹರಿವು ಏರಿಕೆ!

ಶಿವಮೊಗ್ಗ (shivamogga), ಜೂ. 16: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಮಲೆನಾಡಿನಲ್ಲಿ ಅಬ್ಬರ ಜೋರಾಗಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಜೂ. 16 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಮಾಣಿಯಲ್ಲಿ 307 ಮಿಲಿ ಮೀಟರ್ (ಮಿ.ಮೀ) ಅತ್ಯಧಿಕ ಮಳೆಯಾಗಿದೆ. ಉಳಿದಂತೆ ಹುಲಿಕಲ್ ನಲ್ಲಿ 279 ಮಿ.ಮೀ, ಸಾವೆಹಕ್ಲು 262 ಮಿ.ಮೀ, ಯಡೂರು 232 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 255 ಮಿ.ಮೀ ಮಳೆಯಾಗಿದೆ.

ಒಳಹರಿವು ಹೆಚ್ಚಳ : ಜಲಾನಯನ ಪ್ರದೇಶ ವ್ಯಾಪ್ತಿಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಹಾಗೂ ತುಂಗಾ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ಜೂ. 16 ರ ಬೆಳಿಗ್ಗೆ 8 ಗಂಟೆ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂನ #linganamakki ಒಳಹರಿವು 39,961 ಕ್ಯೂಸೆಕ್ ಗೆ ಏರಿಕೆಯಾಗಿದೆ. 3012 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಡ್ಯಾಂನ ನೀರಿನ ಮಟ್ಟ 1766.40 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1745.25 ಅಡಿಯಷ್ಟಿತ್ತು.

ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ #TungaDam ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ.

‘ಪ್ರಸ್ತುತ ಡ್ಯಾಂನ ಒಳಹರಿವು 31 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, 22 ಕ್ರಸ್ಟ್ ಗೇಟ್ ಗಳ ಮೂಲಕ ಒಳಹರಿವಿನಷ್ಟೆ ನೀರನ್ನು ಹೊರಹರಿಸಲಾಗುತ್ತಿದೆ’ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ತಿಪ್ಪಾನಾಯ್ಕ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಉಳಿದಂತೆ ಭದ್ರಾ ಡ್ಯಾಂನ #BhadraDam ನೀರಿನ ಒಳಹರಿವು 5417 ಕ್ಯೂಸೆಕ್ ಇದೆ. 1170 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ನೀರಿನ ಮಟ್ಟ 144.9 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 26 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.

Shivamogga, June 16: Monsoon rains have intensified in Shivamogga district. The monsoon is raging in the malnad areas and heavy rains are being received in the areas of the Western Ghats. In the last 24 hours ending at 8 am on June 16, Mani in Hosanagar taluk received the highest rainfall of 307 millimeters (mm). Hulikal received 279 mm, Savehaklu 262 mm, Yadoor 232 mm, and Mastikatte 255 mm. There has been a significant increase in the inflow into the Linganamakki and Tunga reservoirs due to widespread rainfall in the catchment areas.

shimoga rain | BREAKING NEWS | Shivamogga: Elderly man dies after house wall collapses due to rain – many injured! shimoga rain | BREAKING NEWS | ಶಿವಮೊಗ್ಗ : ಮಳೆಯಿಂದ ಮನೆಯ ಗೋಡೆ ಕುಸಿದು ವೃದ್ದೆ ಸಾವು – ಹಲವರಿಗೆ ಗಾಯ! Previous post shimoga rain | BREAKING NEWS | ಶಿವಮೊಗ್ಗ : ಮಳೆಗೆ ಮನೆಯ ಗೋಡೆ ಕುಸಿದು ವೃದ್ದೆ ಸಾವು – ಹಲವರಿಗೆ ಗಾಯ!
Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ Next post shimoga | ಶಿವಮೊಗ್ಗ : ಜೂ. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ