shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ! Shivamogga: Lokayukta police raid officer's house!

shimoga | lokayukta raid | ಶಿವಮೊಗ್ಗ : ಏಕಕಾಲಕ್ಕೆ ಲೋಕಾಯುಕ್ತ ದಾಳಿ – ದಾಖಲೆಗಳ ತಪಾಸಣೆ!

ಶಿವಮೊಗ್ಗ (shivamogga), ಜೂ. 23: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ ಎಸ್ ಪ್ರದೀಪ್ ರವರ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ತಂಡ ಏಕಕಾಲಕ್ಕೆ ದಾಳಿ ನಡೆಸಿದ ಘಟನೆ ಜೂ. 24 ರ ಬೆಳಿಗ್ಗೆ ನಡೆದಿದೆ.

ಪ್ರದೀಪ್ ಅವರಿಗೆ ಸೇರಿದ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ನಲ್ಲಿರುವ ನಿವಾಸ, ಶಿಕಾರಿಪುರದ ಭದ್ರಾಪುರ ಹಾಗೂ ಹೊಸನಗರ ತಾಲೂಕಿನಲ್ಲಿರುವ ತೋಟದ ಮನೆ ಮತ್ತು ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಮೇಲೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೂರ್ನಾಲ್ಕು ಪ್ರತ್ಯೇಕ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯಕ್ಕೂ ಮೀರಿದ ಸಂಪತ್ತು ಗಳಿಕೆಯ ಆರೋಪದ ಮೇರೆಗೆ ದಾಳಿ ನಡೆದಿದೆ ಎಂದು ಹೇಳಲಾಗಿದ್ದು, ಲೋಕಾಯುಕ್ತ ತಂಡಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga, June 23: A Lokayukta team simultaneously raided the residence and office of Dr S Pradeep, Associate Research Director of the Department of Organic Agriculture at Keladi Shivappanayaka Agriculture and Horticulture University, on the morning of June 24.

shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 09 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 24 ರ ತರಕಾರಿ ಬೆಲೆಗಳ ವಿವರ
Israel-Iran conflict: Peace is the only way forward Author: Dr. Vishnu Bharath Alampalli, Bangalore. israel iran war | ಇಸ್ರೇಲ್ – ಇರಾನ್ ಸಂಘರ್ಷ : ಶಾಂತಿ ಸ್ಥಾಪನೆಯೊಂದೇ ನಮಗಿರುವ ಮಾರ್ಗ ಲೇಖಕರು : ಡಾ. ವಿಷ್ಣು ಭರತ್ ಅಲಂಪಳ್ಳಿ, ಬೆಂಗಳೂರು. Next post israel iran war | ಇಸ್ರೇಲ್ – ಇರಾನ್ ಸಂಘರ್ಷ : ಶಾಂತಿ ಸ್ಥಾಪನೆಯೊಂದೇ ನಮಗಿರುವ ಮಾರ್ಗ