Sigandur Bridge Program: Siddaramaiah lashes out at BJP leaders! ಸಿಗಂದೂರು ಸೇತುವೆ ಕಾರ್ಯಕ್ರಮ : ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ಗರಂ!

sigandur bridge | ರಾಜ್ಯದ ಅತೀ ಉದ್ದದ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ : ಉದ್ಘಾಟನೆಗೆ ದಿನಗಣನೆ!

ಶಿವಮೊಗ್ಗ, ಜೂ. 25: ರಾಜ್ಯದಲ್ಲಿಯೇ ಅತೀ ಉದ್ದದ ಒಳನಾಡು ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ಬಂದಿದೆ. ಸಣ್ಣಪುಟ್ಟ ಕೆಲಸ ಕಾರ್ಯಗಳು ನಡೆಯುತ್ತಿವೆ. ಎಲ್ಲ ಅಂದುಕೊಂಡಂತೆ ನಡೆದರೆ ಜುಲೈ ತಿಂಗಳಲ್ಲಿ ಸೇತುವೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.

ಲಭ್ಯ ಮಾಹಿತಿ ಅನುಸಾರ ಕೊನೆಯ ಹಂತದ ಡಾಂಬರೀಕರಣ ಹಾಗೂ ಮೂರು ಕಡೆ ಸೇತುವೆ ಸೆಗ್ಮೆಂಟ್ ಅಂಚು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ಬೀಳುತ್ತಿರುವ ಭಾರೀ ಮಳೆಯಿಂದ ಸದರಿ ಕಾಮಗಾರಿ ನಡೆಸಲು ಅಡೆತಡೆಯಾಗಿದೆ ಎನ್ನಲಾಗಿದೆ.

ಈ ನಡುವೆ ಸೇತುವೆಯ ಭಾರ ತಡೆಯುವಿಕೆ ಪರೀಕ್ಷೆ (ಲೋಡ್ ಟೆಸ್ಟಿಂಗ್) ನಡೆಸಲಾಗಿದೆ. ಸುಮಾರು 15 ಕ್ಕೂ ಅಧಿಕ ಭಾರ ಹೊತ್ತ ಟಿಪ್ಪರ್ ಲಾರಿಗಳನ್ನು ಸೇತುವೆ ಮೇಲೆ ಓಡಿಸಿ ಪರೀಕ್ಷಿಸಲಾಗಿದೆ. ಸದರಿ ಮಾಹಿತಿಯನ್ನು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಕರ್ನಾಟಕ ರಾಜ್ಯದ ಅತೀ ಉದ್ದದ ಒಳನಾಡು ಕೇಬಲ್ ಆಧಾರಿತ ಸೇತುವೆಯಾಗಿದೆ. 2. 25 ಕಿ.ಮೀ. ಉದ್ದದ ಎಕ್ಸಟ್ರಾ ಡೋಸ್ಡ್ ಬ್ಯಾಲೆನ್ಸ್’ಸ್ಡ್ ಕ್ಯಾಂಟಿಲಿವರ್ ಸೇತುವೆ ವಿನ್ಯಾಸ ಹೊಂದಿದೆ. ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲಿಗೆ ಕಾರಣಕರ್ತರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ’ ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಬಹು ನಿರೀಕ್ಷಿತ : ಶರಾವತಿ ಹಿನ್ನೀರಿನ ಕುಗ್ರಾಮಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಮಹತ್ತರ ಉದ್ದೇಶದಿಂದ, ಅಂಬಾರಗೊಡ್ಲು – ಕಳಸವಳ್ಳಿ ನಡುವಿನ ಹಿನ್ನೀರಿಗೆ ಸೇತುವೆ ನಿರ್ಮಿಸಲಾಗಿದೆ. ಸದರಿ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂಬುವುದು ಹಲವು ದಶಕಗಳ ಕನಸಾಗಿತ್ತು. ಇದೀಗ ಇದು ನನಸಾಗಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, 2019 ರಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

423 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. 2.25 ಕಿ.ಮೀ. ಉದ್ದವಿದ್ದು, ಶರಾವತಿ ನದಿಯ ಪ್ರವಾಹ ತಡೆಯುವ ಸಾಮರ್ಥ್ಯ ಹೊಂದಿದೆ. ಕೇಬಲ್ ಸ್ಟೇಡ್ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಿಸಲಾಗಿದೆ. ಭಾರತದಲ್ಲಿ ವಿಶಿಷ್ಟ ವಿನ್ಯಾಸ ಹೊಂದಿರುವ ಸೇತುವೆಗಳಲ್ಲಿ ಇದು ಕೂಡ ಒಂದಾಗಲಿದೆ.

ಸೇತುವೆ ನಿರ್ಮಾಣದಿಂದ ಶಿವಮೊಗ್ಗ ಹಾಗೂ ಉಡುಪಿ ನಡುವಿನ ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ ಭೇಟಿ ಸುಲಭವಾಗಲಿದೆ. ಹಾಗೆಯೇ ಶರಾವತಿ ಹಿನ್ನೀರು ಭಾಗದ ಸಂಪರ್ಕ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ.

‘ಸಿಗಂದೂರು ಸೇತುವೆಯು, ಕರ್ನಾಟಕ ರಾಜ್ಯದ ಅತೀ ಉದ್ದದ ಒಳನಾಡು ಕೇಬಲ್ ಆಧಾರಿತ ಸೇತುವೆಯಾಗಿದೆ. 2. 25 ಕಿ.ಮೀ. ಉದ್ದದ, ಎಕ್ಸಟ್ರಾ ಡೋಸ್ಡ್ ಬ್ಯಾಲೆನ್ಸ್’ಸ್ಡ್ ಕ್ಯಾಂಟಿಲಿವರ್ ವಿನ್ಯಾಸ ಹೊಂದಿದೆ. ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲಿಗೆ ಕಾರಣಕರ್ತರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ’ ಸಂಸದ ಬಿ ವೈ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ತಿಳಿಸಿದ್ದಾರೆ.

*** ಈಗಾಗಲೇ ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದ್ದು, ಉದ್ಘಾಟನೆ ಯಾವಾಗ ಎಂಬ ಚರ್ಚೆ ಜನಮಾನಸದಲ್ಲಿ ನಡೆಯಲಾರಂಭಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಕ ಸೇತುವೆ ಉದ್ಘಾಟಿಸಬೇಕು ಎಂಬುವುದು ಸಂಸದ ಬಿ ವೈ ರಾಘವೇಂದ್ರ ಅವರ ಇರಾದೆಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿಯವರ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ಧಾರೆಂಬ ಮಾಹಿತಿ ಲಭ್ಯವಾಗಿದೆ. ಎಲ್ಲ ಅಂದುಕೊಂಡಂತೆ ನಡದರೆ ಜುಲೈ ತಿಂಗಳಲ್ಲಿ ಸೇತುವೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

*** ‘ಸಿಗಂದೂರು ಸೇತುವೆ ಹೊಸ ಮೈಲುಗಲ್ಲಾಗಿದೆ. ಹಲವು ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬಂದಿದೆ. ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. ಬಹುತೇಕ ಕಡೆ ಸೇತುವೆಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಇದು ಹಲವು ರೀತಿಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಕಾರಣದಿಂದ ಸಿಗಂದೂರು ಸೇತುವೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ನಂತರ, ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆದ್ಯ ಗಮನಹರಿಸಬೇಕು’ ಎಂದು ಪಿಡಬ್ಲ್ಯೂಡಿ ಇಲಾಖೆ ನಿವೃತ್ತ ಅಧೀಕ್ಷಕ ಎಂಜಿನಿಯರ್ ಬಿ ಎಸ್ ಬಾಲಕೃಷ್ಣ ಅವರು ಸಲಹೆ ನೀಡುತ್ತಾರೆ.  

Shivamogga, June 25: The work on the Sigandur Bridge, which is considered to be the longest inland cable-stayed bridge in the state, is almost complete. Minor works are underway. If everything goes as planned, the bridge is likely to be inaugurated in July. “The longest inland cable-stayed bridge in the state of Karnataka. 2. 25 km long Extra Dosed Balanced Cantilever Bridge design. I would like to thank Prime Minister Narendra Modi and Union Transport Minister Nitin Gadkari for creating a new milestone in the connectivity system” MP BY Raghavendra said in a social media message.

#ಸಿಗಂದೂರು, #ಸಿಗಂದೂರುಸೇತುವೆ, #ಅಂಬಾರಗೊಡ್ಲುಕಳಸವಳ್ಳಿ, #ಶರಾವತಿಹಿನ್ನೀರು, #sigandurbridge, #sigandur, #sigandurbridgenews, #sagara, #shimoga, #shivamogga, #sigandurtemple, #sharavatiriver, #sharavatibackwater,

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!
Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ Next post shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಜೂ. 26, 27 ರಂದು ವಿದ್ಯುತ್ ವ್ಯತ್ಯಯ