Shivamogga: A cow that fell into the upper Tunga canal was rescued! ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳು ರಕ್ಷಣೆ!

shimoga | ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಹಸು ರಕ್ಷಣೆ!

ಶಿವಮೊಗ್ಗ (shivamogga), ಜು. 11: ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳೊಂದನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದ ಘಟನೆ, ಜು. 11 ರ ಬೆಳಿಗ್ಗೆ ಶಿವಮೊಗ್ಗ ನಗರದ ಹೊರವಲಯ ಜೆ ಹೆಚ್ ಪಟೇಲ್ ಬಡಾವಣೆ ಸಮೀಪ ನಡೆದಿದೆ.

ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ತಂಡ, ನಾಲೆಯಿಂದ ಸುರಕ್ಷಿತವಾಗಿ ಆಕಳನ್ನು ಮೇಲಕ್ಕೆತ್ತುವಲ್ಲಿ ಸಫಲವಾಗಿದೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ತಂಡದ ಎ ಎಫ್ ಎಸ್ ಟಿ ಓ ಹುಸೇನ್, ಲೀಡಿಂಗ್ ಫೈರ್ ಮ್ಯಾನ್ ಲೋಹಿತ್ ಕುಮಾರ್, ಎಫ್ ಡಿ ಸಂಗಮೇಶ್, ಫೈರ್ ಮ್ಯಾನ್ ಗಳಾದ ವೆಂಕಟೇಶ್, ನಿಹಾಲ್, ಭೀಮಪ್ಪ ತುಂಗಾಳ್, ಯಶವಂತ್ ಭಾಗಿಯಾಗಿದ್ದರು.

ಏನಾಯ್ತು? : ಸುಮಾರು 100 ಅಡಿ ಆಳವಿರುವ ತುಂಗಾ ಮೇಲ್ದಂಡೆ ನಾಲೆಯ ಬದಿ ಆಕಳುಗಳು ಮೇಯುವ ವೇಳೆ, ಆಕಸ್ಮಿಕವಾಗಿ ಆಕಳೊಂದು ನಾಲೆಗೆ ಬಿದ್ದಿದೆ. ಅದೃಷ್ಟವಶಾತ್ ಮೇಲ್ಭಾಗದಿಂದ ಸುಮಾರು 15 ಅಡಿ ಪ್ರದೇಶದ ಬದಿಯಲ್ಲಿ ಆಕಳು ಬಿದ್ದಿತ್ತು.

ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ತಂಡ ಸುರಕ್ಷಿತವಾಗಿ ಆಕಳನ್ನು ಮೇಲಕ್ಕೆತ್ತುವಲ್ಲಿ ಸಫಲವಾಗಿದೆ.

Shivamogga, Jul. 11: The fire brigade rescued a cow that had fallen into the upper Tunga canal. The incident took place on the morning of Jul. 11 near JH Patel Layout on the outskirts of Shivamogga city.

A feud between in-laws ends in the m*ur**der of one of them! ಶಿವಮೊಗ್ಗ : ದಾಯಾದಿಗಳ ಕಲಹ ಕೊ**ಲೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯ! Previous post shimoga news | ಶಿವಮೊಗ್ಗ : ಯುವಕನ ಕೊ**ಲೆ – ಆರೋಪಿ ಅರೆಸ್ಟ್!
Shivamogga, Jul. 22: Water will be released from the main canal of the Bhadra Upper River Project under the Visvesvaraya Jal Nigam Limited to Vani Vilas Sagar from 27-07-2025 as per the government's directive, the announcement said. Next post bhadra dam | ಭದ್ರಾ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!