Sale of ganja: Shimoga court sentenced five people from West Bengal to rigorous imprisonment! ಗಾಂಜಾ ಮಾರಾಟ : ಪಶ್ಚಿಮ ಬಂಗಾಳದ ಐವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್!

shimoga | ಗಾಂಜಾ ಮಾರಾಟ : ಪಶ್ಚಿಮ ಬಂಗಾಳದ ಐವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್!

ಶಿವಮೊಗ್ಗ (shivamogga), ಜು. 16: ಗಾಂಜಾ ಮಾರಾಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಐವರು ನಿವಾಸಿಗಳಿಗೆ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಜು. 16 ರಂದು ತೀರ್ಪು ನೀಡಿದೆ.

ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡದ ದಕ್ಕಿನ್ ದಿನೇಸ್ ಪುರ್ ದ ಟೆಂಗಾಬಾರ್ ನಿವಾಸಿ ಅಲೋಕ್ ಮಂಡಲ್ (34), ಕೂಚ್ ಬೆಹರ್ ನ ಮಗ್ಪಲ ಭೋಗ್ದಾಭ್ರಿ ನಿವಾಸಿ ಶ್ರೀಬಾಷ್ ಸರ್ಕಾರ್ (20), ಉತ್ತರ್ ಸಿಂಗಿಮರಿ ನಿವಾಸಿ ಅಮ್ರಿತ್ ಮಂಡಲ್ (27)

ಗೊಸಾನಿಮರಿ ಸಮೀಪದ ಖಲಿಷದ ನಿವಾಸಿ ಸಂಕರ್ ಬ್ಯಾಪಾರಿ (28) ಹಾಗೂ ಕೂಚ್ ಬೆಹರ್ ನ ದಿನ್ಹಟ ಜಂಬರಿ ನಿವಾಸಿ ಹರಧನ್ ಮಂಡಲ್ (32) ಶಿಕ್ಷೆಗೊಳಗಾದ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಇವರೆಲ್ಲರು ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸ ಮಾಡುವವರಾಗಿದ್ಧಾರೆ.

ಕಠಿಣ ಜೈಲು ಶಿಕ್ಷೆಯ ಜೊತೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 12-7-2022 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠ್ಠಲ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಈ ಐವರನ್ನು ಪೊಲೀಸರು ಬಂಧಿಸಿದ್ದರು. 1 ಕೆಜಿ 564 ಗ್ರಾಂ ತೂಕದ ಗಾಂಜಾ, 3500 ನಗದು, 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದರು. ಅಂದಿನ ತನಿಖಾಧಿಕಾರಿಯಾದ ಇನ್ಸ್’ಪೆಕ್ಟರ್ ಅಶ್ವಥ್ ಗೌಡ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

Shimoga, Ju. 16: On June 16, the Principal District and Sessions Court, Shimoga, sentenced five residents of West Bengal state to 4 years rigorous imprisonment in the case of sale of ganja.

shimoga APMC vegetable prices | Details of vegetable prices for December 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 16 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 17 ರ ತರಕಾರಿ ಬೆಲೆಗಳ ವಿವರ