
shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಿದ ಆಯುಕ್ತ ಕೆ ಎ ದಯಾನಂದ್
ಶಿವಮೊಗ್ಗ (shivamogga), ಜು. 19: ಶಿವಮೊಗ್ಗ ನಗರದ ಕಲ್ಲಳ್ಳಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆ ಹೆಚ್ ಬಿ) ಕಚೇರಿಗೆ ಜು. 19 ರ ಸಂಜೆ ಆಯುಕ್ತ ಕೆ ಎ ದಯಾನಂದ್ ಅವರು ಭೇಟಿ ನೀಡಿದ್ದರು.
ಈ ವೇಳೆ ಎ.ಇ.ಇ ನವೀಕೃತ ಕೊಠಡಿ ಉದ್ಘಾಟಿಸಿದರು. ನಂತರ ಕಚೇರಿ ಅಧಿಕಾರಿ – ಸಿಬ್ಬಂದಿಗಳೊಂದಿಗೆ ಔಪಚಾರಿ ಸಭೆ ನಡೆಸಿದರು. ತದನಂತರ ಸಾರ್ವಜನಿಕರು, ಸಂಘಸಂಸ್ಥೆಗಳ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಕೆ ಹೆಚ್ ಬಿ ಕಾರ್ಯಪಾಲಕ ಅಭಿಯಂತರ ಶರಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್, ಅಧೀಕ್ಷಕರಾದ ಅನ್ವರ್ ಬಾಬು, ಎಫ್.ಡಿ.ಎ ನವೀನ್, ಸಿಬ್ಬಂದಿಗಳಾದ ರಂಜಿತ್, ಉಷಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಮನವಿ : ಸೋಮಿನಕೊಪ್ಪ – ಬಸವನಗಂಗೂರು ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಆಯುಕ್ತರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಪತ್ರ ಅರ್ಪಿಸಿತು.
ಬಡಾವಣೆಯಲ್ಲಿ ಸಮುದಾಯ ಭವನ, ಗ್ರಂಥಾಲಯ, ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಸೇರಿದಂತೆ ಮತ್ತೀತರ ಸಾರ್ವಜನಿಕ ಉದ್ದೇಶಕ್ಕಾಗಿ ನಿವಾಸಿಗಳ ಸಂಘಕ್ಕೆ ಸಿ.ಎ ನಿವೇಶನ ಮಂಜೂರು ಮಾಡುವಂತೆ ಕೋರಲಾಗಿದೆ.
ಮನವಿ ಸ್ವೀಕರಿಸಿದ ನಂತರ ಆಯುಕ್ತರು ಮಾತನಾಡಿ, ಈ ಕುರಿತಂತೆ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರ, ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಬು, ನಿರ್ದೇಶಕರಾದ ನಾಗರತ್ನ, ಸಮನ್ವಯ ಸಂಸ್ಥೆಯ ಪ್ರಮುಖ ಕಾಶಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Shivamogga, July 19: KHB Commissioner K A Dayanand visited the Karnataka Housing Board (KHB) office in Kallalli, Shivamogga city on the evening of July 19.