
shimoga district crime news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ವರದಿಗಳು
ಶಿಕಾರಿಪುರ : ಕಂಪನಿಯವರೆಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
ಶಿಕಾರಿಪುರ (shikaripura), ಜು. 21: ಸಿಂಟೆಕ್ಸ್ ಕಂಪನಿಯಿಂದ ಆಗಮಿಸಿದ್ದೆವೆಂದು ಮನೆಯೊಂದಕ್ಕೆ ಆಗಮಿಸಿದ ನಾಲ್ವರು ವಂಚಕರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾದ ಘಟನೆ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶೀಲಮ್ಮ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. 120 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ 30 ಸಾವಿರ ನಗದನ್ನು ಕಳ್ಳರು ಅಪಹರಿಸಿದ್ದಾರೆ.
ಜು. 15 ರ ಮಧ್ಯಾಹ್ನದ ಸಮಯದಲ್ಲಿ ನಾಲ್ವರು ಅಪರಿಚಿತರು ಆಗಮಿಸಿದ್ದಾರೆ. ಸಿಂಟೆಕ್ಸ್ ಕಂಪನಿಯವರೆಂದು ಹೇಳಿದ್ದಾರೆ. ಸಿಂಟೆಕ್ಸ್ ನೋಡಬೇಕೆಂದು ಇಬ್ಬರು ವ್ಯಕ್ತಿಗಳು ಮಹಡಿ ಮೇಲೆ ತೆರಳಿದ್ದಾರೆ. ಇವರೊಂದಿಗೆ ಶೀಲಮ್ಮ ಹಾಗೂ ಅವರು ಅತ್ತೆ ತೆರಳಿದ್ದಾರೆ.
ಇನ್ನಿಬ್ಬರು ವಂಚಕರು ಮನೆಯೊಳಗೆ ತೆರಳಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ನಂತರ ಎಲ್ಲರು ಸ್ಥಳದಿಂದ ಪರಾರಿಯಾಗಿದ್ಧಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಕೆಎಸ್ಆರ್’ಟಿಸಿ ಡಿಪೋದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆ!
ಶಿವಮೊಗ್ಗ (shimoga), ಜು. 21: ಶಿವಮೊಗ್ಗ ನಗರದ ಕೆಎಸ್ಆರ್’ಟಿಸಿ ಡಿಪೋದಲ್ಲಿ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಹೊಸನಗರ ತಾಲೂಕು ಬಿಲ್ಲೇಶ್ವರ ಗ್ರಾಮದ ನಿವಾಸಿ ಸುಧೀಂದ್ರ ಶೆಣೈ ಎಂಬುವರಿಗೆ ಸೇರಿದ ಬಜಾಜ್ 4 ಎಸ್ ಚಾಂಪಿಯನ್ ಕಳುವಾದ ಬೈಕ್ ಎಂದು ಗುರುತಿಸಲಾಗಿದೆ.
ಇವರು ಜು. 9 ರ ಬೆಳಿಗ್ಗೆ ಬಸ್ ನಿಲ್ದಾಣ ಡಿಪೋದಲ್ಲಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಬೈಕ್ ಕಳವು ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಗಾಂಜಾ ಸೇವನೆ ಮಾಡಿದ್ದವನ ವಿರುದ್ದ ಕೇಸ್ ದಾಖಲು!
ಶಿವಮೊಗ್ಗ (shivamogga), ಜು. 21: ಗಾಂಜಾ ಸೇವನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನ ವಿರುದ್ದ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಜು. 19 ರ ಸಂಜೆ ಟಿಪ್ಪುನಗರ ಬಡಾವಣೆಯ ಮುಖ್ಯ ರಸ್ತೆಯ ಪದ್ಮಾ ಟಾಕೀಸ್ ಬಳಿ ಇಬ್ಬರು ವ್ಯಕ್ತಿಗಳು ಅಮಲಿನಲ್ಲಿದ್ದು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು.
ಇವರು ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂಬ ಕಾರಣದಿಂದ ಇಬ್ಬರನ್ನು ಕರ್ತವ್ಯನಿರತ ಸಿಇಎನ್ ಠಾಣೆ ಸಿಬ್ಬಂದಿ ವಶಕ್ಕೆ ಪಡೆದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು.
ಈ ವೇಳೆ ಓರ್ವ ವ್ಯಕ್ತಿಯು ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ವ್ಯಕ್ತಿಯ ವಿರುದ್ದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.