Shimoga: The bike parked in front of the house caught fire! ಶಿವಮೊಗ್ಗ : ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ!

shimoga crime news | ಶಿವಮೊಗ್ಗ : ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ!

ಶಿವಮೊಗ್ಗ (shivamogga), ಜು. 22: ಮನೆ ಮುಂಭಾಗ ನಿಲ್ಲಿಸಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ ಘಟನೆ, ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಕೃಷಿಕ ಓಂಕಾರಪ್ಪ ಎಂಬುವರ ಮನೆಯ ಬಳಿ ತಡರಾತ್ರಿ 1 ಗಂಟೆ ಸರಿಸುಮಾರಿಗೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮನೆಯ ಹೊರಭಾಗದಲ್ಲಿ ಭಾರೀ ಪ್ರಮಾಣದ ಹೊಗೆ ಬರುತ್ತಿರುವುದನ್ನು ಗಮನಿಸಿದ ಓಂಕಾರಪ್ಪ ಅವರು, ಹೊರಬಂದು ಗಮನಿಸಿದಾಗ ಬೈಕ್ ಬೆಂಕಿಯಿಂದ ಉರಿಯುತ್ತಿರುವುದು ಕಂಡುಬಂದಿದೆ.

ತಕ್ಷಣವೇ ಕುಟುಂಬದ ಇತರೆ ಸದಸ್ಯರೊಂದಿಗೆ ಸೇರಿಕೊಂಡು ಬೈಕ್ ಗೆ ಹೊತ್ತಿದ್ದ ಬೆಂಕಿ ನಂದಿಸಲಾಗಿದೆ. ಯಾರು ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಓಂಕಾರಪ್ಪ ಅವರು ಮಾಹಿತಿ ನೀಡಿದ್ದಾರೆ.

Shivamogga, July 22: A Hero Honda Splendor bike parked in front of a house caught fire late last night in Kachinakatte village of Shivamogga taluk. It is reported that the incident took place near the house of farmer Omkarappa at around 1 am.

shimoga district crime news | Crime reports from various parts of Shimoga district shimoga district crime news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ವರದಿಗಳು Previous post shimoga district crime news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ವರದಿಗಳು
Shivamogga : Accused robbed a teacher by pretending to be a Reels fan! ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು! Next post shimoga news update | ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಯುವಕ ಸಾ**ವು | ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳವು |