Decision to release water from Bhadra Reservoir to canals ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ

shimoga | bhadra dam | ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ

ಶಿವಮೊಗ್ಗ (shivamogga), ಜು. 21: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಲ್ಲಿನ ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಿಗೆ ನೀರು ಒದಗಿಸಲು,  ಭದ್ರಾ ಜಲಾಶಯದಿಂದ ಬಲ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜು. 21 ರಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ  ಎಂದು ಹೇಳಿದ್ದಾರೆ.

ಭದ್ರಾ ಜಲಾಶಯದ ಎಡದಂಡೆ, ಬಲದಂಡೆ, ಆನವೇರಿ ಶಾಖಾ ನಾಲೆ, ದಾವಣಗೆರೆ, ಮಲೆಬೆನ್ನೂರು ಹಾಗೂ ಹರಿಹರ ಶಾಖಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಎರಡೂ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಬಲದಂಡೆ ನಾಲೆಗೆ ಜು. 22 ರಿಂದ ನೀರು ಬಿಡಲಾಗುವುದು. ಉಳಿದಂತೆ ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ.

Shimoga, July 17: In order to provide water to the monsoon crops of the current row in the areas covered by Bhadra Achukattu, a decision has been taken in the Bhadra Yojana Irrigation Advisory Committee meeting to divert water from the Bhadra reservoir to the right and left bank canals.

The Shimoga Police have turned their backs on the ‘baniyan gang’ - the night patrol system has been tightened further! ‘ಬನಿಯನ್ ಗ್ಯಾಂಗ್’ ಬೆನ್ನು ಬಿದ್ದ ಶಿವಮೊಗ್ಗ ಪೊಲೀಸರು – ರಾತ್ರಿ ಗಸ್ತು ವ್ಯವಸ್ಥೆ ಮತ್ತಷ್ಟು ಬಿಗಿ! Previous post shimoga news | ‘ಬನಿಯನ್ ಗ್ಯಾಂಗ್’ ಬೆನ್ನು ಬಿದ್ದ ಶಿವಮೊಗ್ಗ ಪೊಲೀಸರು – ರಾತ್ರಿ ಗಸ್ತು ವ್ಯವಸ್ಥೆ ಮತ್ತಷ್ಟು ಬಿಗಿ!
shimoga district crime news | Crime reports from various parts of Shimoga district shimoga district crime news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ವರದಿಗಳು Next post shimoga district crime news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ವರದಿಗಳು