Shimoga: A huge tree fell on the transformer due to wind and rain! ಶಿವಮೊಗ್ಗ : ಗಾಳಿ – ಮಳೆಗೆ ಟ್ರಾನ್ಸ್’ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ!

shimoga news | ಶಿವಮೊಗ್ಗ : ಟ್ರಾನ್ಸ್‌ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ!

ಶಿವಮೊಗ್ಗ (shivamogga), ಜು. 27: ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬೃಹದಾಕಾರದ ಮರವೊಂದು, ವಿದ್ಯುತ್ ಟ್ರಾನ್ಸ್’ಫಾರ್ಮರ್ ಮೇಲೆಯೇ ಉರುಳಿಬಿದ್ದ ಘಟನೆ ಜುಲೈ 27 ರ ಮಧ್ಯಾಹ್ನ ನಡೆದಿದೆ.

ಆದಾಯ ತೆರಿಗೆ ಇಲಾಖೆ ಕಚೇರಿ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿದೆ. ಗಾಳಿ – ಮಳೆಯಿಂದ ಮರ ಉರುಳಿ ಬಿದ್ದಿದೆ. ಟ್ರಾನ್ಸ್‌ಫಾರ್ಮರ್ ಸೇರಿದಂತೆ ಕೆಲ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅದೃಷ್ಟಾವಶಾತ್ ಮರ ಬಿದ್ದ ವೇಳೆ ರಸ್ತೆಯಲ್ಲಿ ಜನ – ವಾಹನ ಸಂಚಾರದ ಪ್ರಮಾಣ ಕಡಿಮೆಯಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದರಿಂದ ಗೋಪಾಲಗೌಡ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ನಾಗರೀಕರು ತೊಂದರೆಗೊಳಗಾಗುವಂತಾಗಿದೆ.

ಕಾಲಮಿತಿಯೊಳಗೆ ಮರ ತೆರವು ಮಾಡಿ,  ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳನ್ನು ದುರಸ್ತಿಗೊಳಿಸಿ ಬಡಾವಣೆಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಮೆಸ್ಕಾಂಗೆ ಸ್ಥಳೀಯ ನಾಗರೀಕರು ಮನವಿ ಮಾಡಿದ್ದಾರೆ.

Shimoga, Ju 27: An incident took place on the afternoon of July 27 when a huge tree fell on an electricity transformer in Gopalagowda barangay of Shimoga city. The incident took place on the road next to the Income Tax Department office. The tree fell due to wind and rain. Some electric poles including transformer have been damaged. Fortunately, when the tree fell, there was less traffic on the road, locals informed.

Bhadra river created flood threat in Bhadravati! ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ! Previous post bhadravati news | ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 28 ರ ತರಕಾರಿ ಬೆಲೆಗಳ ವಿವರ