
energy dept | ವ್ಯರ್ಥವಾಗುತ್ತಿರುವ ಟ್ರಾನ್ಸ್’ಫಾರ್ಮಾರ್ ಗಳು : ಗಮನಹರಿಸುವುದೆ ಇಂಧನ ಇಲಾಖೆ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಆಗಸ್ಟ್ 12: ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡ ವಸತಿ ಬಡಾವಣೆಗಳಲ್ಲಿ ನಿಯಮಾನುಸಾರ ಅಳವಡಿಕೆ ಮಾಡಿರುವ ಟ್ರಾನ್ಸ್’ಫಾರ್ಮಾರ್ ಗಳಲ್ಲಿ, ಹಲವು ಉಪಯೋಗಕ್ಕೆ ಬರುತ್ತಿಲ್ಲ. ಇದು ಇಂಧನ ಇಲಾಖೆಗೆ ಅನಗತ್ಯ ಹೊರೆಯಾಗಿ ಪರಿಣಮಿಸುತ್ತಿದೆ. ನಿರ್ವಹಣೆ ದುಬಾರಿಯಾಗಿದ್ದು, ಅಕ್ಷರಶಃ ಬಿಳಿಯಾನೆಯಂತಾಗಿ ಪರಿಣಮಿಸಿವೆ!
ಈ ಹಿಂದೆ ವಸತಿ ಬಡಾವಣೆಗಳ ನಿರ್ಮಾಣದ ವೇಳೆ, ನಿವೇಶನಗಳಿಗೆ ಅನುಗುಣವಾಗಿ ಟ್ರಾನ್ಸ್’ಫಾರ್ಮಾರ್ ಗಳ ಅಳವಡಿಕೆ ಮಾಡುವುದು ಕಡ್ಡಾಯವಾಗಿತ್ತು. ಆ ನಂತರವಷ್ಟೆ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತಿತ್ತು.
ಸದ್ಯ ಹಲವು ಬಡಾವಣೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ಇದರಿಂದ ಅಗತ್ಯಕ್ಕಿಂತ ಹೆಚ್ಚಿನ ಟ್ರಾನ್ಸ್’ಫಾರ್ಮಾರ್ ಗಳಿವೆ. ಇವುಗಳ ಉಪಯೋಗ ನಾಗರೀಕರಿಗೆ ಅಗತ್ಯವಿಲ್ಲವಾಗಿದೆ. ಅಗತ್ಯವಿರುವೆಡೆ ಸ್ಥಳಾಂತರಿಸುವ ಕಾರ್ಯವನ್ನು ಎಸ್ಕಾಂಗಳು ಮಾಡುತ್ತಿಲ್ಲ. ಇದಕ್ಕೆ ನಿಯಮದಲ್ಲಿ ಅವಕಾಶವಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.
ಈ ಕಾರಣದಿಂದ ಪ್ರಸ್ತುತ ಹೊಸ ಬಡಾವಣೆಗಳ ನಿರ್ಮಾಣದ ವೇಳೆ, ಕೇವಲ ಒಂದು ಟ್ರಾನ್ಸ್’ಫಾರ್ಮಾರ್ ಅಳವಡಿಸಲಾಗುತ್ತದೆ. ಬಡಾವಣೆಗಳಲ್ಲಿ ಕಟ್ಟಡಗಳ ನಿರ್ಮಾಣ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಟ್ರಾನ್ಸ್’ಫಾರ್ಮಾರ್ ಗಳನ್ನು ಅಳವಡಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಇದರಿಂದ ಹೊಸದಾಗಿ ನಿರ್ಮಾಣವಾಗುವ ಬಡಾವಣೆಗಳಲ್ಲಿ, ಎಲ್ಲೆಂದರಲ್ಲಿ ಟ್ರಾನ್ಸ್’ಫಾರ್ಮಾರ್ ಗಳು ಗೋಚರವಾಗುತ್ತಿಲ್ಲ. ಹಾಲಿ ವ್ಯವಸ್ಥೆ ಸಾಕಷ್ಟು ಅನುಕೂಲವಾಗಿದೆ ಎಂಬುವುದು ನಾಗರೀಕರು ಮಾತ್ರವಲ್ಲದೆ ಇಂಧನ ಇಲಾಖೆಯ ನೌಕರರು ಕೂಡ ಹೇಳುತ್ತಾರೆ.
ಸರ್ಕಾರ ಗಮನಿಸಲಿ : ಈ ಹಿಂದೆ ಅಭಿವೃದ್ದಿಪಡಿಸಿದ ಬಡಾವಣೆಗಳಲ್ಲಿ ನಿಯಮಾನುಸಾರ ಅಳವಡಿಕೆ ಮಾಡಿರುವ ಹಾಗೂ ಪ್ರಸ್ತುತ ನಾಗರೀಕರ ಬಳಕೆಗೆ ಅಗತ್ಯವಿರದ ಟ್ರಾನ್ಸ್’ಫಾರ್ಮಾರ್ ಗಳನ್ನು ಅಗತ್ಯವಿರುವೆಡೆ ಸ್ಥಳಾಂತರಿಸುವ ಕಾರ್ಯವನ್ನು ಇಂಧನ ಇಲಾಖೆ ಮಾಡಬೇಕಾಗಿದೆ.
ಇದರಿಂದ ನಾಗರೀಕರಿಗೆ ಅನುಕೂಲವಾಗುವುದರ ಜೊತೆಗೆ, ಇಂಧನ ಇಲಾಖೆಗೆ ಹೊಸ ಟ್ರಾನ್ಸ್’ಫಾರ್ಮಾರ್ ಗಳ ಖರೀದಿಯ ದುಂದು ವೆಚ್ಚಕ್ಕೆ ಕಡಿವಾಣ ಬೀಳುವಂತಾಗುತ್ತದೆ. ಜೊತೆಗೆ ಸದರಿ ಟ್ರಾನ್ಸ್’ಫಾರ್ಮಾರ್ ಗಳ ನಿರ್ವಹಣೆಯ ಹೊರೆಯೂ ತಪ್ಪುತ್ತದೆ. ಇನ್ನಾದರೂ ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.
ಅಗತ್ಯವಿರುವೆಡೆ ಟ್ರಾನ್ಸ್’ಫಾರ್ಮಾರ್ ಸ್ಥಳಾಂತರಿಸಲಿ
*** ಅದೆಷ್ಟೊ ಗ್ರಾಮಗಳಲ್ಲಿ ಟ್ರಾನ್ಸ್’ಫಾರ್ಮಾರ್ ಗಳ ಕೊರತೆಯಿಂದ ನಾಗರೀಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಟ್ರಾನ್ಸ್’ಫಾರ್ಮಾರ್ ಗಳ ಮೇಲಿನ ಒತ್ತಡದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿವೆ. ಮತ್ತೊಂದೆಡೆ, ಬಡಾವಣೆಗಳಲ್ಲಿ ಅಗತ್ಯವಿಲ್ಲದಿದ್ದರೂ ಟ್ರಾನ್ಸ್’ಫಾರ್ಮಾರ್ ಗಳಿವೆ. ಇಂತಹ ಹೆಚ್ಚುವರಿ ಟ್ರಾನ್ಸ್’ಫಾರ್ಮಾರ್ ಗಳನ್ನು ಗುರುತಿಸಿ, ಅಗತ್ಯವಿರುವೆಡೆ ಸ್ಥಳಾಂತರಿಸಲು ಇಂಧನ ಇಲಾಖೆ ಕಾರ್ಯೋನ್ಮುಖವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರು ಆದ್ಯ ಗಮನಹರಿಸಬೇಕಾಗಿದೆ.
shivamogga, august 16: Many of the transformers that have been installed as per the rules in the housing estates built in the last few years are not being used. This is becoming an unnecessary burden on the Energy Department. #electric_transformers, #electrictransformers, #transformers