Ripponpet: School bus overturns – Nursery school children escape danger! ರಿಪ್ಪನ್’ಪೇಟೆ : ಶಾಲಾ ಬಸ್ ಪಲ್ಟಿ – ಅಪಾಯದಿಂದ ಪಾರಾದ ನರ್ಸರಿ ಶಾಲೆ ಮಕ್ಕಳು!

Ripponpet | ರಿಪ್ಪನ್’ಪೇಟೆ : ಶಾಲಾ ಬಸ್ ಪಲ್ಟಿ – ಅಪಾಯದಿಂದ ಪಾರಾದ ಮಕ್ಕಳು!

ಹೊಸನಗರ (hosanagara), ಆಗಸ್ಟ್ 16: ಖಾಸಗಿ ಶಾಲಾ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್’ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನುಗೋಡು ಗ್ರಾಮದ ಬಳಿ ಆಗಸ್ಟ್ 16 ರ ಬೆಳಿಗ್ಗೆ ಸಂಭವಿಸಿದೆ.

ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ 12 ಮಂದಿ ಮಕ್ಕಳು ಸದರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಮಕ್ಕಳ ರಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಮ್ಮಡಿಕೊಪ್ಪ – ಮೂಗುಡ್ತಿ ಮಾರ್ಗದಲ್ಲಿ ಬಸ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿ ಪಲ್ಟಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದೆ. ಉಳಿದಂತೆ ಬಸ್ ನಲ್ಲಿದ್ದ ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Hosanagar, August 16: An incident in which a private school bus overturned occurred on the morning of August 16 near Kanugodu village under Ripponpet police station limits in Hosanagar taluk of Shivamogga district.

Wasting Transformers: Focus on Energy Department? ವ್ಯರ್ಥವಾಗುತ್ತಿರುವ ಟ್ರಾನ್ಸ್’ಫಾರ್ಮಾರ್ ಗಳು : ಗಮನಹರಿಸುವುದೆ ಇಂಧನ ಇಲಾಖೆ? Previous post energy dept | ವ್ಯರ್ಥವಾಗುತ್ತಿರುವ ಟ್ರಾನ್ಸ್’ಫಾರ್ಮಾರ್ ಗಳು : ಗಮನಹರಿಸುವುದೆ ಇಂಧನ ಇಲಾಖೆ?
Shivamogga: Judge's surprise visit to Abbalagere Anganwadi - Meeting at Gram Panchayat office ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ Next post shimoga | ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ