soraba | ಸೊರಬ : 38 ಕುರಿಗಳ ದಿಡೀರ್ ಸಾವು!
ಸೊರಬ (sorab), ಸೆಪ್ಟೆಂಬರ್ 12: ಮೇಯಲು ತೆರಳಿದ್ದ 38 ಕುರಿಗಳು ದಿಡೀರ್ ಅಸ್ವಸ್ಥಗೊಂಡು ಮೃತಪಟ್ಟ ಘಟನೆ, ಸೊರಬ ಪಟ್ಟಣದ ಬಂಗಾರಪ್ಪ ಸ್ಟೇಡಿಯಂ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆ ಖಡಕಲಾಟ ಗ್ರಾಮದ ಕುರಿಗಾಹಿ ಸುರೇಶ ಬೀರಾ ಅವಡಖಾನ ಎಂಬುವರಿಗೆ ಸದರಿ ಕುರಿಗಳು ಸೇರಿದ್ದಾಗಿದೆ. ಕಳೆದ ಕೆಲ ದಿನಗಳಿಂದ ಸುರೇಶ್ ಬೀರಾ ಹಾಗೂ ಇತರರು, ಸೊರಬ ಸುತ್ತಮುತ್ತಲು ಕುರಿಗಳನ್ನು ಮೇಯಿಸುತ್ತಿದ್ದಾರೆ.
ಬುಧವಾರ ಸುರೇಶ ಬೀರಾ ಅವರಿಗೆ ಸೇರಿದ ಕುರಿಗಳ ಆರೋಗ್ಯದಲ್ಲಿ, ದಿಡೀರ್ ಏರುಪೇರು ಕಂಡುಬಂದಿದೆ. ತಕ್ಷಣವೇ ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ.
ಬುಧವಾರ 12 ಕುರಿಗಳು ಹಾಗೂ ಗುರುವಾರ 26 ಕುರಿಗಳು ಅಸುನೀಗಿವೆ. ವಿಷಪೂರಿತ ಆಹಾರ ಸೇವಿಸಿ ಕುರಿಗಳು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಕುರಿಗಳ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕುರಿಗಳ ಸಾವಿನಿಂದ ಕುರಿಗಾಹಿ ಕುಟುಂಬಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Soraba, September 12: An incident occurred near Bangarappa Stadium in Soraba town where 38 sheep that had gone out for grazing suddenly fell ill and died.
The said sheep belong to Suresh Beera Avadakhana, a shepherd from Khadakalata village in Belgaum district. For the past few days, Suresh Beera and others have been grazing the sheep around Soraba.
