
hassan news | ಹಾಸನ : ಗಣಪತಿ ಮೆರವಣಿಗೆ ವೇಳೆ ಘನಘೋರ ದುರಂತ – ಟ್ರಕ್ ಹರಿದು 9 ಜನರ ದುರ್ಮರಣ!
ಹಾಸನ (hassan), ಸೆಪ್ಟೆಂಬರ್ 13: ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಘನಘೋರ ದುರಂತವೊಂದು ಸೆಪ್ಟೆಂಬರ್ 12 ರ ರಾತ್ರಿ ಸಂಭವಿಸಿದೆ.
ಮೈಸೂರು – ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಹೋಗುತ್ತಿದ್ದ ಮೆರವಣಿಗೆ ಮೇಲೆ, ಮತ್ತೊಂದು ಬದಿಯಲ್ಲಿ ತೆರಳುತ್ತಿದ್ದ ಸರಕು ಸಾಗಾಣೆ ಟ್ರಕ್ ವೊಂದು ಡಿವೈಡರ್ ದಾಟಿ ಮೆರವಣಿಗೆಯ ಮೇಲಿದ್ದವರ ಮೇಲೆ ಹರಿದಿದೆ.
ಇದರಿಂದ ಮೆರವಣಿಗೆಯಲ್ಲಿದ್ದ 9 ಜನ ಮೃತಪಟ್ಟು, ಸುಮಾರು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ.
ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಾಗರೀಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನೆಲೆಸಿದ್ದು, ಮೃತರ ಕಡೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಹೇಗಾಯ್ತು? : ರಾತ್ರಿ 8 ಗಂಟೆಯಿಂದ 8-30 ರ ನಡುವೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯುತ್ತಿತ್ತು. ನೂರಾರು ಜನರು ಭಾಗಿಯಾಗಿದ್ದರು. ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಟ್ರಕ್ ನಂತರ ಏಕಾಏಕಿ ಡಿವೈಡರ್ ದಾಟಿಕೊಂಡು ಮೆರವಣಿಗೆ ಮೇಲೆ ನುಗ್ಗಿದೆ.
Hassan, September 13: A horrific tragedy occurred in Hassan on the night of September 12 during the pre-Ganpati Visarjana procession. A goods truck travelling on the other side of the national highway between Mysore and Hassan crossed the divider and ran over the procession.