Shimoga: Mahatma Gandhi - Lal Bahadur Shastri Birth Anniversary Ceremony ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ಧೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ

shimoga | ಶಿವಮೊಗ್ಗ : ಮಹಾತ್ಮ ಗಾಂಧೀಜಿ – ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಸಮಾರಂಭ

ಶಿವಮೊಗ್ಗ (shivamogga), ಅಕ್ಟೋಬರ್ 2: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಕೆ ಹೆಚ್ ಬಿ ಪ್ರೆಸ್ ಕಾಲೋನಿಯಲ್ಲಿ ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್’ಪೆಕ್ಟರ್ ಲೋಹಿತ್ ಅವರು ಮಾತನಾಡಿ, ‘ಮಹಾತ್ಮ ಗಾಂಧಿಜೀ ಅವರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅದರಂತೆ ನಾವೆಲ್ಲರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಜಾಗೃತರಾಗಬೇಕಾಗಿದೆ’ ಎಂದು ತಿಳಿಸಿದರು.

ಕೆಹೆಚ್ ಬಿ ಸಂಸ್ಥೆಯ ಅಧೀಕ್ಷಕರಾದ ಅನ್ವರ್ ಬಾಬು ಅವರು ಮಾತನಾಡಿ, ‘ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ಧೂರ್ ಶಾಸ್ತ್ರೀರವರ ತತ್ವಾದರ್ಶಗಳಲ್ಲಿ ನಾವೆಲ್ಲರು ಮುನ್ನಡೆಯೋಣ’ ಎಂದು ಕರೆ ನೀಡಿದರು.

ಸಂಘದ ಮುಖಂಡರು ಹಾಗೂ ಖಾಸಗಿ ಸಂಸ್ಥೆ ಉದ್ಯೋಗಿಯಾದ ರಂಗಪ್ಪ ಪಟೇಲ್ ಗುಡುಮಗಟ್ಟೆ ಅವರು ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಹೋರಾಟದ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದರು. ಅದೇ ರೀತಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಕೂಡ ಉದಾತ್ತ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಮಹಾತ್ಮರ ಜಯಂತಿಯನ್ನು ನಿವಾಸಿಗಳು ಆಚರಿಸುತ್ತಿರುವುದು ನಿಜಕ್ಕೂ ಮಾದರಿ ಕಾರ್ಯವಾಗಿದೆ’ ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷರೂ ಆದ ಖಾಸಗಿ ಸಂಸ್ಥೆ ಉದ್ಯೋಗಿ ಚಂದ್ರಪ್ಪರವರು ಮಾತನಾಡಿ, ಮಹಾತ್ಮರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಮುಖಂಡ ಕೊಟ್ರೇಶಪ್ಪ ಹಾಗೂ ಪಾಲಿಕೆ ಪೌರಕಾರ್ಮಿಕರ ಮೇಲುಸ್ತುವಾರಿ ಸಿಬ್ಬಂದಿ ನೇತ್ರಾರವರು ಮಾತನಾಡಿ, ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸಿದರು. ಸಂಘದ ಮುಖಂಡ ಗುರುಚರಣ್ ಅವರು ಗೀತಾ ಗಾಯನ ನಡೆಸಿಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ. ರೇಣುಕೇಶ್ ಅವರು ವಹಿಸಿದ್ದರು. ಸಂಘದ ಖಜಾಂಚಿ, ಯುವ ಮುಖಂಡ ಶಿವಕುಮಾರ್, ಮುಖಂಡರಾದ ಮಿದ್ದೆ ಮಾರುತಿ, ರವಿ, ಹಿರಿಯರಾದ ವಿಜಯಣ್ಣ, ಬಿ ಚಂದ್ರಪ್ಪ ಸೇರಿದಂತೆ ಮೊದಲಾದವರಿದ್ದರು.

Shivamogga, October 2: A ceremony to celebrate the birth anniversary of Father of the Nation Mahatma Gandhiji and former Prime Minister Lal Bahadur Shastri was held on October 2 at Sominakoppa KHB Press Colony on the outskirts of Shivamogga city. The program was organized by the KHB Press Colony Residents’ Welfare Association. Floral tributes were paid to the portraits of Mahatma Gandhiji and Lal Bahadur Shastri.

Shivamogga: Doddamma Charitable Trust presents awards to achievers ಶಿವಮೊಗ್ಗ : ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ Previous post shimoga | ಶಿವಮೊಗ್ಗ : ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ
Shivamogga : A lone woman was brutally murdered in Kunsi village! ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ! Next post shimoga | kumsi | ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ!