
shimoga crime news | ಶಿವಮೊಗ್ಗ : ಹಾಸ್ಟೆಲ್ ವಿದ್ಯಾರ್ಥಿಗೆ ಮಾರಕಾಸ್ತ್ರದಿಂದ ಬೆದರಿಸಿದ ಕಿಡಿಗೇಡಿಗಳು!
ಶಿವಮೊಗ್ಗ (shivamogga), ಅಕ್ಟೋಬರ್ 7: ಶಿವಮೊಗ್ಗ ನಗರದ ಹೊರವಲಯ ಸಹ್ಯಾದ್ರಿ ನಗರ ಸಮೀಪದ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ ಬೈಕ್ ವೊಂದರಲ್ಲಿ ಆಗಮಿಸಿದ ಮೂವರು ಕಿಡಿಗೇಡಿಗಳು, ಕ್ಷುಲ್ಲಕ ಕಾರಣಕ್ಕೆ ಖಾಸಗಿ ಹಾಸ್ಟೆಲ್ ವೊಂದರ ವಿದ್ಯಾರ್ಥಿಯೋರ್ವನಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ ಘಟನೆ ಅಕ್ಟೋಬರ್ 7 ರ ಸಂಜೆ ನಡೆದಿದೆ.
ಹಾಸ್ಟೆಲ್ ನಿಂದ ಜೆ ಹೆಚ್ ಪಟೇಲ್ ಬಡಾವಣೆಯ ತಮಿಳ್ ತಾಯ್ ಸಮುದಾಯ ಭವನ ಸಮೀಪದ ರಸ್ತೆಯಲ್ಲಿ ವಿದ್ಯಾರ್ಥಿ ಹೋಗುತ್ತಿದ್ದ ವೇಳೆ, ಬೈಕ್ ನಲ್ಲಿ ಕಿಡಿಗೇಡಿಗಳು ಆಗಮಿಸಿದ್ದಾರೆ.
ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾರೆ. ನಂತರ ತಮ್ಮ ಬಳಿಯಿದ್ದ ಮಾರಕಾಸ್ತ್ರದಿಂದ ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಬೆನ್ನಟ್ಟಿ ಹೋಗಿದ್ದಾರೆ. ಜೊತೆಗೆ ಹಾಸ್ಟೆಲ್ ಬಳಿಯು ತೆರಳಿ ಬೆದರಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದರಿ ಘಟನೆಯಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕೆಲ ಸಮಯ ಭಯಭೀತರಾಗುವಂತಾಯಿತು. ವಿಷಯ ತಿಳಿಯುತ್ತಿದ್ದಂತೆ ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಈ ವೇಳೆಗಾಗಲೇ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಸ್ಥಳೀಯ ನಾಗರೀಕರು ತಿಳಿಸಿದ್ದಾರೆ.
ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದು, ಸಮೀಪದ ಕಟ್ಟಡಗಳಲ್ಲಿನ ಸಿ ಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಕ್ಯಾಮರಾ ಇಲ್ಲ? : ಸಹ್ಯಾದ್ರಿ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಖಾಸಗಿ ಕಾಲೇಜ್ ವೊಂದರ ಹಾಸ್ಟೆಲ್ ಇದ್ದು, ವಿದ್ಯಾರ್ಥಿ – ವಿದ್ಯಾರ್ಥಿನಿಯರಿದ್ದಾರೆ. ಆದರೆ ಸದರಿ ಕಟ್ಟಡದಲ್ಲಿ ಸಿ ಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲವೆಂಬ ಮಾಹಿತಿ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
shivamogg, october 07: An incident took place on the evening of October 7 when three miscreants, who arrived on a bike on the Sominakoppa main road near Sahyadri Nagar on the outskirts of Shivamogga city, threatened a student of a private hostel with a deadly weapon over a trivial matter.