Shivamogga: Murder case accused gets stiff prison sentence! ಶಿವಮೊಗ್ಗ : ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ!

shimoga | ಶಿವಮೊಗ್ಗ : ಗಾಂಜಾ ಮಾರಾಟ ಕೇಸ್ – ಸಾಗರದ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ!

ಶಿವಮೊಗ್ಗ (shivamogga), ಅಕ್ಟೋಬರ 10: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಗರ ಪಟ್ಟಣದ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಾಗರ ಪಟ್ಟಣದ ನಿವಾಸಿಗಳಾದ ಇಮ್ರಾನ್ ಖಾನ್ (25) ಹಾಗೂ ಇಮ್ತಿಯಾಜ್ (28) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ.  ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ 25 ಸಾವಿರ ರೂ. ದಂಡ ಕೂಡ ನ್ಯಾಯಾಲಯ ವಿಧಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 04-08-2021 ರಂದು ಸಾಗರ ಪಟ್ಟಣದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಹೆಚ್ ರಸ್ತೆಯ ಸದ್ಗುರು ಲೇಔಟ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಟೌನ್ ಠಾಣೆ ಪೊಲೀಸರು ಬಂಧಿಸಿದ್ದರು.

ಆರೋಪಿಗಳಿಂದ ಓಮ್ನಿ ಕಾರು, 1 ಕೆಜಿ 60 ಗ್ರಾಂ ಒಣ ಗಾಂಜಾ ಮತ್ತು 800 ನಗದನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂದು ಸಬ್ ಇನ್ಸ್’ಪೆಕ್ಟರ್ ಆಗಿದ್ದ ಸಾಗರ್’ಕರ್ ಎಂಬುವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga, October 10: The Principal Additional District and Sessions Court of Shivamogga has issued an order sentencing two people from Sagar town to 3 years rigorous imprisonment in connection with the marijuana sale case.

Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! Previous post shimoga | power cut news | ಶಿವಮೊಗ್ಗ : ಅಕ್ಟೋಬರ್ 14 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Disruption in drinking water supply in various parts of Shivamogga city on October 29th! ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 29 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ! Next post shimoga | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ