Shimoga: accident zone - PWD has finally taken action to widen the state highway! ಶಿವಮೊಗ್ಗ : ಅಪಘಾತ ವಲಯ - ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!

shimoga | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!

ಶಿವಮೊಗ್ಗ (shivamogga), ಅಕ್ಟೋಬರ್ 15: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸಹ್ಯಾದ್ರಿ ನಗರದ ಕಿರು ಸೇತುವೆ ಬಳಿ, ಅಪಘಾತ ವಲಯವಾಗಿ ಪರಿಣಮಿಸಿದ್ದ ರಾಜ್ಯ ಹೆದ್ದಾರಿಯ ಅಗಲೀಕರಣಕ್ಕೆ, ಲೋಕೋಪಯೋಗಿ ವಿಶೇಷ ವಿಭಾಗ ಕೊನೆಗೂ ಕ್ರಮಕೈಗೊಂಡಿದೆ.

ಸುಮಾರು 100 ಮೀಟರ್ ಉದ್ದದಷ್ಟು ಹೆದ್ದಾರಿಯನ್ನು ಅಗಲೀಕರಣಗೊಳಿಸಲಾಗುತ್ತಿದೆ. ಇದಕ್ಕೆ ಅಗತ್ಯವಾದ ಭೂಮಿಯನ್ನು ಈಗಾಗಲೇ ಸ್ವಾದೀನ ಪಡಿಸಿಕೊಂಡಿದ್ದು, ದ್ವಿ ಪಥ ಮಾರ್ಗವಾಗಿ ಅಭಿವೃದ್ದಿಗೊಳಿಸುವ ಕಾರ್ಯವನ್ನು ಪಿಡಬ್ಲ್ಯೂಡಿ ಇಲಾಖೆ ಆರಂಭಿಸಿದೆ.

ನೆನೆಗುದಿಗೆ : ವಿನೋಬನಗರ ಪೊಲೀಸ್ ಚೌಕಿ ವೃತ್ತದಿಂದ ಸೋಮಿನಕೊಪ್ಪದವರೆಗಿನ ರಸ್ತೆಯು, ದ್ವಿಪಥ ಹೆದ್ದಾರಿಯಾಗಿ ಅಭಿವೃದ್ದಿಪಡಿಸಲಾಗಿತ್ತು. ಆದರೆ ಸಹ್ಯಾದ್ರಿ ನಗರದ ಕಿರು ಸೇತುವೆ ಬಳಿಯಿಂದ ಸುಮಾರು 100 ಮೀಟರ್ ವರೆಗಿನ ರಸ್ತೆಯನ್ನು, ಭೂ ಸ್ವಾದೀನ ಸಮಸ್ಯೆಯಿಂದ ಅಗಲೀಕರಣಗೊಳಿಸಿರಲಿಲ್ಲ.

ಕಳೆದ ಸರಿಸುಮಾರು 15 ವರ್ಷಗಳಿಂದ ಸದರಿ ರಸ್ತೆ ಹಾಗೆಯೇ ಇತ್ತು. ತಿರುವಿನಿಂದ ಕೂಡಿದ್ದಿದು ಹಾಗೂ ರಸ್ತೆ ಕಿರಿದಾಗಿದ್ದ ಕಾರಣದಿಂದ ಅಪಘಾತಗಳು ಸಂಭವಿಸುತ್ತಿದ್ದವು. ವಾಹನ ಸವಾರರ ಪಾಲಿಗೆ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿತ್ತು. ಸದರಿ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ನಾಗರೀಕರು ಆಗ್ರಹಿಸಿಕೊಂಡು ಬಂದಿದ್ದರು.

Shivamogga, October 15: The Public Works Special Division has finally taken steps to widen the state highway, which had become an accident zone near the short bridge in Sahyadri Nagar under the jurisdiction of the Shivamogga Municipal Corporation.

Shivamogga - Bhadravati Urban Development Authority is preparing 'Maha Yojana - 2041'! ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’! Previous post shivamogga – bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!