ಶಿವಮೊಗ್ಗ (shivamogga), ಡಿಸೆಂಬರ್ 23: ಸಮಾರಂಭವೊಂದರಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ ತಾಯಿ ಹಾಗೂ ಮಗಳು, ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಗೆ ಸಮೀಪದ ಚಿಲಕಾದ್ರಿಯಲ್ಲಿ ನಡೆದಿದೆ.
ಅವಿನಾಶ್ ಎಂಬುವರ ಪತ್ನಿ ವೀಣಾ (32) ಹಾಗೂ ಪುತ್ರಿ ಚೈತನ್ಯ (7) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. ಈ ಕುರಿತಂತೆ ಡಿಸೆಂಬರ್ 23 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಡಿಸೆಂಬರ್ 3 ರಂದು ಎಂಗೇಜ್’ಮೆಂಟ್ ಸಮಾರಂಭವೊಂದಕ್ಕೆ ಮಗಳೊಂದಿಗೆ ವೀಣಾರವರು ತೆರಳಿದ್ದರು. ನಂತರ ತಾಯಿ – ಮಗಳು ಮನೆಗೆ ಹಿಂದಿರುಗಿಲ್ಲ. ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ಮೊಬೈಲ್ ಫೊನ್ ಸ್ವಿಚ್ ಆಫ್ ಆಗಿದೆ.
ವೀಣಾರ ಚಹರೆ : 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ.
ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
Shivamogga, December 23: A mother and daughter who had left home to attend a function mysteriously disappeared without returning home. The incident took place in Chilakadri near Harige under the jurisdiction of Shivamogga Rural Police Station.


One Comment on “shimoga news | ಶಿವಮೊಗ್ಗ : ಸಮಾರಂಭಕ್ಕೆ ಹೋದ ತಾಯಿ – ಮಗಳು ನಾಪತ್ತೆ!”
Comments are closed.